ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನದ ಶೌಚಾಲಯದ ಒಳಗೆ ಬಾಂಬ್ ಬೆದರಿಕೆ ಚೀಟಿ ಪತ್ತೆಯಾಗಿದೆ.
ಬೆಂಗಳೂರಿನಿಂದ ಅಹಮದಾಬಾದ್ಗೆ ತೆರಳುತ್ತಿದ್ದ ಇಂಡಿಗೋ 6E-6423 ವಿಮಾನದ ಶೌಚಾಲಯದ ಒಳಗೆ ಬೆದರಿಕೆ ಚೀಟಿ ಇದೆ. ಇದರಲ್ಲಿ ದಯವಿಟ್ಟು ಹೋಗಬೇಡಿ ಬಾಂಬ್ ಇದೆ ಎಂದು ಬರೆಯಲಾಗಿದೆ. ಈ ಚೀಟಿಯನ್ನು ನೋಡಿದ ಪ್ರಯಾಣಿಕರು ಹೆದರಿದ್ದಾರೆ.
ಬೆದರಿಕೆಯ ಚೀಟಿ ಪತ್ತೆಯಾದ ಹಿನ್ನೆಲೆ ಸಂಜೆ 7:30ಕ್ಕೆ ಹೊರಡಬೇಕಿದ್ದ ವಿಮಾನ ಐದು ಗಂಟೆ ತಡವಾಗಿ ಟೇಕ್ ಆಫ್ ಆಗಿದೆ. ಈ ಸಂಬಂಧ ಎಟಿಸಿಯಿಂದ ಕ್ಲಿಯರೆನ್ಸ್ ಸಿಕ್ಕಿದ್ದು, ಓರ್ವ ಪ್ರಯಾಣಿಕನೇ ಈ ಚೀಟಿ ಬರೆದು ಬಿಸಾಡಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಪ್ರಯಾಣಿಕನ ವಿರುದ್ಧ ದೂರು ದಾಖಲಾಗಿದೆ.



