July 17, 2026
Friday, July 17, 2026
spot_img

ಇಂಡಿಗೋ ವಿಮಾನದ ಶೌಚಾಲಯದಲ್ಲಿ ಬಾಂಬ್‌ ಬೆದರಿಕೆ ಚೀಟಿ ಪತ್ತೆ, ಬೆಂಗಳೂರು ಏರ್‌ಪೋರ್ಟ್‌ಗೆ ಥ್ರೆಟ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನದ ಶೌಚಾಲಯದ ಒಳಗೆ ಬಾಂಬ್‌ ಬೆದರಿಕೆ ಚೀಟಿ ಪತ್ತೆಯಾಗಿದೆ.

ಬೆಂಗಳೂರಿನಿಂದ ಅಹಮದಾಬಾದ್‌ಗೆ ತೆರಳುತ್ತಿದ್ದ ಇಂಡಿಗೋ 6E-6423 ವಿಮಾನದ ಶೌಚಾಲಯದ ಒಳಗೆ ಬೆದರಿಕೆ ಚೀಟಿ ಇದೆ. ಇದರಲ್ಲಿ ದಯವಿಟ್ಟು ಹೋಗಬೇಡಿ ಬಾಂಬ್‌ ಇದೆ ಎಂದು ಬರೆಯಲಾಗಿದೆ. ಈ ಚೀಟಿಯನ್ನು ನೋಡಿದ ಪ್ರಯಾಣಿಕರು ಹೆದರಿದ್ದಾರೆ.

ಬೆದರಿಕೆಯ ಚೀಟಿ ಪತ್ತೆಯಾದ ಹಿನ್ನೆಲೆ ಸಂಜೆ 7:30ಕ್ಕೆ ಹೊರಡಬೇಕಿದ್ದ ವಿಮಾನ ಐದು ಗಂಟೆ ತಡವಾಗಿ ಟೇಕ್ ಆಫ್ ಆಗಿದೆ. ಈ ಸಂಬಂಧ ಎಟಿಸಿಯಿಂದ ಕ್ಲಿಯರೆನ್ಸ್ ಸಿಕ್ಕಿದ್ದು, ಓರ್ವ ಪ್ರಯಾಣಿಕನೇ ಈ ಚೀಟಿ ಬರೆದು ಬಿಸಾಡಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಪ್ರಯಾಣಿಕನ ವಿರುದ್ಧ ದೂರು ದಾಖಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !