ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಳೆಗಾಲ ಶುರುವಾಗ್ತಿದ್ದಂತೆ ಕೊರೋನಾ ಅಬ್ಬರ ಕೂಡ ಆರಂಭವಾಗಿದೆ. ದೇಶದಾದ್ಯಂತ ಈಗ ಮತ್ತೆ ಕೊರೋನಾ ಭೀತಿ ಎದುರಾಗಿದ್ದು, ಜುಲೈ ತಿಂಗಳ ಕೇವಲ 17 ದಿನಗಳಲ್ಲಿ, ದೇಶದಲ್ಲಿ 339 ಹೊಸ ಪ್ರಕರಣಗಳು ವರದಿಯಾಗಿವೆ. ನಾಲ್ಕು ರೋಗಿಗಳು ಸಾವನ್ನಪ್ಪಿದ್ದಾರೆ.
ಕೊರೊನಾ ಸೋಂಕು ಈಗಾಗಲೇ 339 ಮಂದಿಯಲ್ಲಿ ಕಾಣಿಸಿಕೊಂಡಿದೆ ಎಂದು ವರದಿ ಮಾಡಲಾಗಿದೆ. ಕೇರಳದಲ್ಲಿ ಅತಿ ಹೆಚ್ಚು ಕೊರೋನಾವೈರಸ್ ಪ್ರಕರಣಗಳು ವರದಿಯಾಗಿವೆ. ಕೇಳದಲ್ಲಿ 115 ರೋಗಿಗಳಿಗೆ ಸೋಂಕು ತಗುಲಿದೆ. ಕರ್ನಾಟಕ ಎರಡನೇ ಸ್ಥಾನದಲ್ಲಿದ್ದು, 64 ಪ್ರಕರಣಗಳು ಪತ್ತೆಯಾಗಿವೆ. ಮಹಾರಾಷ್ಟ್ರದಲ್ಲಿ 43 ಮಂದಿ ಸೋಂಕಿಗೊಳಗಾಗಿದ್ದಾರೆ.
ದೆಹಲಿಯಲ್ಲಿ 18 ಮಂದಿ, ತಮಿಳುನಾಡಿನಲ್ಲಿ 39 ಮಂದಿ ಹಾಗೂ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ 18 ಮಂದಿಗೆ ಕೊರೋನಾ ಕಾಣಿಸಿಕೊಂಡಿದೆ. ಇನ್ನು ರಾಜಸ್ಥಾನದಲ್ಲಿ 12 ಮಂದಿ ಮತ್ತು ಆಂಧ್ರಪ್ರದೇಶದಲ್ಲಿ 12 ಮಂದಿಗೆ ಕೊರೋನಾ ತಗುಲಿದೆ. ಆಂಧ್ರಪ್ರದೇಶದಲ್ಲಿ ನಾಲ್ವರು ರೋಗಿಗಳು ಸಾವನ್ನಪ್ಪಿದ್ದಾರೆ.



