October 9, 2026
Friday, October 9, 2026
spot_img

ಮೆಟ್ರೋದಲ್ಲಿ ರೀಲ್ಸ್ ಹುಚ್ಚಾಟಕ್ಕೆ ಬ್ರೇಕ್; ಸಹ ಪ್ರಯಾಣಿಕರಿಗೆ ತೊಂದರೆ ಕೊಟ್ಟರೆ ಬೀಳಲಿದೆ ಭಾರೀ ದಂಡ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮೆಟ್ರೋ ರೈಲು ಹಾಗೂ ನಿಲ್ದಾಣಗಳಲ್ಲಿ ಇನ್ಮುಂದೆ ನಿಯಮ ಮೀರಿ ಹುಚ್ಚಾಟ ಪ್ರದರ್ಶಿಸುವ ಪ್ರಯಾಣಿಕರಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಭಾರಿ ಶಾಕ್ ನೀಡಿದೆ. ನಮ್ಮ ಮೆಟ್ರೋದಲ್ಲಿ ರೀಲ್ಸ್ ಮಾಡುವುದು ಮತ್ತು ಸಹ ಪ್ರಯಾಣಿಕರ ನೆಮ್ಮದಿಗೆ ಭಂಗ ತರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಬಿಎಂಆರ್‌ಸಿಎಲ್ ಮುಂದಾಗಿದ್ದು, ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ಏನೆಲ್ಲಾ ಮಾಡಿದರೆ ಬೀಳುತ್ತೆ ದಂಡ?

ರೈಲಿನ ಒಳಗೆ ಅಥವಾ ಪ್ಲಾಟ್‌ಫಾರ್ಮ್‌ಗಳ ಮೇಲೆ ಸಹ ಪ್ರಯಾಣಿಕರಿಗೆ ಕಿರಿಕಿರಿ ಉಂಟುಮಾಡುವಂತೆ ರೀಲ್ಸ್ ಅಥವಾ ವಿಡಿಯೋ ಚಿತ್ರೀಕರಣ ಮಾಡುವುದು, ಸೀಟುಗಳಿದ್ದರೂ ಅಥವಾ ಇಲ್ಲದಿದ್ದರೂ ನಿಯಮ ಬಾಹಿರವಾಗಿ ಮೆಟ್ರೋ ಕೋಚ್‌ಗಳ ನೆಲದ ಮೇಲೆ ಕುಳಿತುಕೊಳ್ಳುವುದು, ಜೋರಾಗಿ ಹಾಡು ಕೇಳುವುದು, ಗಲಾಟೆ ಮಾಡುವುದು ಅಥವಾ ಪ್ರಯಾಣಿಕರ ಸುರಕ್ಷತೆಗೆ ಧಕ್ಕೆ ತರುವಂತಹ ವರ್ತನೆ ತೋರಿದರೆ ಭಾರೀ ಮೊತ್ತದ ದಂಡ ಬೀಳಲಿದೆ.

ಇದನ್ನೂ ಓದಿ:

ಸುರಕ್ಷಿತ ಪ್ರಯಾಣಕ್ಕೆ ಕಠಿಣ ಮಾರ್ಗಸೂಚಿ:

ಮೆಟ್ರೋ ಪ್ರಯಾಣಿಕರ ಸುರಕ್ಷತೆ ಮತ್ತು ಶಾಂತಿಯುತ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ಈ ಕಠಿಣ ನಿಯಮವನ್ನು ತರಲಾಗಿದೆ. ಹೊಸ ಮಾರ್ಗಸೂಚಿಗಳ ಪ್ರಕಾರ, ಮೊದಲ ಬಾರಿ ನಿಯಮ ಉಲ್ಲಂಘಿಸುವವರಿಂದ 500 ರೂ. ವಸೂಲಿ ಮಾಡಲಾಗುತ್ತದೆ. ಪದೇ ಪದೇ ಮಾಡಿದರೆ ಬರೋಬ್ಬರಿ 5 ಸಾವಿರದಿಂದ 25 ಸಾವಿರದ ವರೆಗೆ ದಂಡ ವಸೂಲಿ ಮಾಡಲು ನಿರ್ಧರಿಸಲಾಗಿದೆ. ಸಾಮಾಜಿಕ ಜಾಲತಾಣಗಳ ಕ್ರೇಜ್‌ಗಾಗಿ ಮೆಟ್ರೋ ಆವರಣವನ್ನು ದುರ್ಬಳಕೆ ಮಾಡಿಕೊಳ್ಳುವವರಿಗೆ ಈ ನಿರ್ಧಾರ ದೊಡ್ಡ ಪಾಠವಾಗಲಿದೆ.

Must Read