July 17, 2026
Friday, July 17, 2026
spot_img

ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್; ಹೈಕಮಾಂಡ್‌ನಿಂದ ’60:40 ಫಾರ್ಮುಲಾ’ ಅಸ್ತ್ರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ರಾಜ್ಯ ರಾಜಕಾರಣದಲ್ಲಿ ಕಳೆದ ಕೆಲವು ದಿನಗಳಿಂದ ತೀವ್ರ ಕುತೂಹಲ ಹಾಗೂ ಹರಹರ ಮೂಡಿಸಿದ್ದ ಸಚಿವ ಸಂಪುಟ ವಿಸ್ತರಣೆ ಕಸರತ್ತಿಗೆ ಕೊನೆಗೂ ಕಾಂಗ್ರೆಸ್ ಹೈಕಮಾಂಡ್ ಹಸಿರು ನಿಶಾನೆ ತೋರಿದೆ. ಸಚಿವಾಕಾಂಕ್ಷಿಗಳಲ್ಲಿ ಸಂಚಲನ ಮೂಡಿಸಿರುವ ಈ ಪ್ರಕ್ರಿಯೆಗೆ ಮುಂದಿನ ವಾರವೇ ಮುಹೂರ್ತ ಫಿಕ್ಸ್ ಆಗುವ ಎಲ್ಲಾ ಸಾಧ್ಯತೆಗಳಿವೆ ಎಂದು ಅತ್ಯಂತ ನಂಬಿಕಸ್ಥ ಮೂಲಗಳು ಖಚಿತಪಡಿಸಿವೆ.

ಹೈಕಮಾಂಡ್‌ನ ’60:40 ಫಾರ್ಮುಲಾ’ ಲೆಕ್ಕಾಚಾರ:

ಈ ಬಾರಿಯ ಸಂಪುಟ ವಿಸ್ತರಣೆಯಲ್ಲಿ ಹೈಕಮಾಂಡ್ ಹೊಸದೊಂದು ಲೆಕ್ಕಾಚಾರವನ್ನು ಮುಂದಿಟ್ಟಿದೆ. ಪಕ್ಷ ಸಂಘಟನೆ ಮತ್ತು ಆಡಳಿತದಲ್ಲಿ ಹೊಸ ಜೋಶ್ ತುಂಬುವ ಸಲುವಾಗಿ ’60:40 ಫಾರ್ಮುಲಾ’ ಅನುಸರಿಸುವಂತೆ ರಾಜ್ಯ ನಾಯಕರಿಗೆ ಹೈಕಮಾಂಡ್ ಕಟ್ಟುನಿಟ್ಟಿನ ಸೂಚನೆ ನೀಡಿದೆ ಎನ್ನಲಾಗಿದೆ. ಈ ಫಾರ್ಮುಲಾದಡಿ ಹೊಸ ಮುಖಗಳಿಗೆ ಹಾಗೂ ಯುವ ನಾಯಕರಿಗೆ ಹೆಚ್ಚಿನ ಆದ್ಯತೆ ಸಿಗಲಿದ್ದು, ಹಿರಿಯರ ಮತ್ತು ಕಿರಿಯರ ಸಮತೋಲನ ಕಾಯ್ದುಕೊಳ್ಳಲು ಹೈಕಮಾಂಡ್ ಒಲವು ತೋರಿದೆ.

ಇದನ್ನೂ ಓದಿ:

ಜುಲೈ 20ರ ನಂತರ ಚುರುಕುಗೊಳ್ಳಲಿದೆ ಪ್ರಕ್ರಿಯೆ:

ಸದ್ಯದ ಮಾಹಿತಿ ಪ್ರಕಾರ, ಜುಲೈ 20ರ ವರೆಗೆ ಸಂಪುಟ ವಿಸ್ತರಣೆ ಪ್ರಕ್ರಿಯೆಗೆ ಹೈಕಮಾಂಡ್ ತಾತ್ಕಾಲಿಕ ಬ್ರೇಕ್ ಹಾಕಿದೆ. ಜುಲೈ 20 ಮುಗಿಯುತ್ತಿದ್ದಂತೆ ದೆಹಲಿ ಮಟ್ಟದಲ್ಲಿ ಅಂತಿಮ ಪಟ್ಟಿ ಸಿದ್ಧವಾಗಲಿದ್ದು, ಆ ಬಳಿಕ ಹೊಸ ಸಚಿವರ ಸೇರ್ಪಡೆ ಪ್ರಕ್ರಿಯೆ ಅತ್ಯಂತ ಚುರುಕಾಗಿ ನಡೆಯಲಿದೆ.

ಈ ವಿಸ್ತರಣೆಯು ಯಾರಿಗೆ ಮಂತ್ರಿ ಭಾಗ್ಯ ತರಲಿದೆ ಮತ್ತು ಯಾರಿಗೆ ಕೈತಪ್ಪಲಿದೆ ಎಂಬುದು ಇಡೀ ರಾಜ್ಯ ರಾಜಕೀಯ ವಲಯದಲ್ಲಿ ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !