July 21, 2026
Tuesday, July 21, 2026
spot_img

ದಿನಭವಿಷ್ಯ: ಇಂದು ಪಾಸಿಟಿವ್‌ ಮನಸ್ಥಿತಿ ಇಟ್ಟುಕೊಳ್ಳುವುದು ಮುಖ್ಯ, ಅದೃಷ್ಟದ ದಿನ

ಮೇಷ
ಪಾಸಿಟಿವ್ ಚಿಂತನೆ ಇರಿಸಿಕೊಳ್ಳಿ. ಸಾಽಸುವಿರಿ. ಇಲ್ಲವಾದರೆ ವಿಫಲತೆ ಕಾಣುವಿರಿ. ಬಂಧುಗಳ ಆಕ್ರೋಶ ಎದುರಿಸುವಿರಿ. ಆರ್ಥಿಕ ಒತ್ತಡ.    
ವೃಷಭ
ಅದೃಷ್ಟದ ದಿನ. ಕಾರ್ಯದಲ್ಲಿ ಸಫಲತೆ. ನಿಮ್ಮ ಹೃದಯಕ್ಕೆ ಆಪ್ತರಾದವರು ನಿಮ್ಮೆಡೆಗೆ ಒಲವು ತೋರುವರು. ಆರ್ಥಿಕ ಉನ್ನತಿ.    
ಮಿಥುನ
ನಿಮ್ಮ ಕೆಲಸದ ಪರಾಮರ್ಶೆ ನಡೆಸಿ. ಇನ್ನೂ ಉತ್ತಮ ಕಾರ್ಯ ನಡೆಸಲು ನಿಮಗೆ ಸಾಧ್ಯ. ಅಲ್ಪತೃಪ್ತಿ ಬಿಡಿ. ದೊಡ್ಡ ಗುರಿ ಇರಿಸಿಕೊಳ್ಳಿ.      
ಕಟಕ
ನಿಮ್ಮ ಶ್ರೇಷ್ಠ ನಿರ್ವಹಣೆ ಇತರರ ಗಮನಕ್ಕೆ ಬಾರದೆ ಹೋಗಬಹುದು. ನಿರಾಶೆ ಬೇಡ. ನಿಮ್ಮ ಕಾರ್ಯ ಮುಂದುವರಿಸಿರಿ.    
ಸಿಂಹ
ಪೂರ್ವನಿಗದಿತ   ಕೆಲಸ ಸಾಧ್ಯವಾಗದು. ಯೋಜನೆ ಬದಲಿಸುವ ಅಗತ್ಯ ಬೀಳಲಿದೆ. ತಾಳ್ಮೆಯಿಂದ ವ್ಯವಹರಿಸಿ. ಕೌಟುಂಬಿಕ ಅಸಹಕಾರ.  
ಕನ್ಯಾ
ಯೋಜಿತ ಕೆಲಸಕ್ಕೆ ಹಿಂಜರಿಕೆ ಬಿಡಿ. ದಿಟ್ಟವಾಗಿ ಮುಂದೆ ಹೆಜ್ಜೆ ಇಡಿ. ನಿಮಗೆ ಪೂರಕ ವಾತಾವರಣ ಸೃಷ್ಟಿಯಾಗಲಿದೆ. ಸೂಕ್ತ ನೆರವೂ ಸಿಗಲಿದೆ.
ತುಲಾ
ಆಂತರಾತ್ಮದ ಮಾತು ಕೇಳಿ. ವಿರೋಧಿಗಳ ಬಗ್ಗೆ ಎಚ್ಚರದಿಂದಿರಿ. ಕೋಪಕ್ಕೆ ವಿವೇಕ ಬಲಿ ಕೊಡಬೇಡಿ. ಕೌಟುಂಬಿಕ ಸಹಕಾರ ಪಡೆದುಕೊಳ್ಳಿ.  
ವೃಶ್ಚಿಕ
ಸಂತೋಷ, ತೃಪ್ತಿ, ಸಾಧನೆ ಇವು ನಿಮ್ಮ ಪಾಲಿಗೆ ಇಂದು ಒದಗಲಿವೆ. ನಿರ್ಧಾರ ಉತ್ತಮ ಫಲ ನೀಡಲಿದೆ. ಬಂಧುಗಳ ಆತಿಥ್ಯ ಸಿಗಲಿದೆ.
ಧನು
ಹಳೆ ಹೂಡಿಕೆಯ ಲಾಭ ಇಂದು ಸಿಗಲಿದೆ. ಪ್ರಯಾಣದಲ್ಲಿ ಸಮಸ್ಯೆ.  ಕೆಲವರಿಗೆ ಅಜೀರ್ಣ, ಗ್ಯಾಸ್ಟ್ರಿಕ್ ಸಮಸ್ಯೆ ಕಾಡಬಹುದು.            
ಮಕರ
ಬಿಡುವಿರದ ದಿನ. ಇದರಿಂದಾಗಿ ವೈಯಕ್ತಿಕ ವಿಷಯ ಕೂಡ ಗೌಣ ಆಗಲಿದೆ. ಆರೋಗ್ಯದ ಕುರಿತಂತೆ ನಿರ್ಲಕ್ಷ್ಯ ತಾಳಬೇಡಿ.        
ಕುಂಭ
ವೃತ್ತಿಕ್ಷೇತ್ರದಲ್ಲಿ ನಿಗೂಢ ಶತ್ರುಗಳು ಕಾಟ ಕೊಡುವರು. ಎಚ್ಚರದಿಂದ ನಡಕೊಳ್ಳಿ. ಹಿರಿಯರಿಗೆ ಸಂಽನೋವು ಸಂಭವ. ಆರ್ಥಿಕ ಹಿನ್ನಡೆ.    
ಮೀನ
ಪದೇಪದೇ ಸಮಸ್ಯೆ ಕಾಡುವುದು. ಹಾಗೆಂದು ಪರಿಹಾರ ಕಾಣದ್ದಲ್ಲ. ಬಂಧುವಿನ ಆರೋಗ್ಯ ಚಿಂತೆಗೆ ಕಾರಣವಾಗಲಿದೆ. ಆರ್ಥಿಕ ಉನ್ನತಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !