July 21, 2026
Tuesday, July 21, 2026
spot_img

ದಿನಭವಿಷ್ಯ: ಮಾತಿನ ಮೇಲೆ ಹಿಡಿತ ಇರಲಿ, ನಿಮ್ಮ ಕಾರ್ಯ ಮೆಚ್ಚುಗೆಗೆ ಪಾತ್ರವಾಗಲಿದೆ

ಮೇಷ
ಇಂದು ಯೋಚಿಸಿ ಮಾತಾಡಿ. ಏಕೆಂದರೆ ಮಾತಿನಿಂದ ವಿವಾದಕ್ಕೆ ಸಿಲುಕುವ ಸಾಧ್ಯತೆ ಇದೆ. ಹಣಕಾಸು ಒತ್ತಡ. ಖರ್ಚು ಅನಿವಾರ್ಯ.
ವೃಷಭ
ಅಸ್ಥಿರ ಮನಸ್ಥಿತಿ. ಅದರ ದುರುಪಯೋಗ ಮಾಡಿಕೊಳ್ಳಲು ಅವಕಾಶ ಕೊಡದಿರಿ. ವ್ಯಕ್ತಿಯೊಬ್ಬರು ನಿಮ್ಮ ಮೇಲೆ ದೊಡ್ಡ ಪ್ರಭಾವ ಬೀರಬಹುದು.
ಮಿಥುನ
ಕೆಲಸದಲ್ಲಿ ವಿಘ್ನ. ಆದರೂ ಕೌಶಲದಿಂದ ಕಾರ್ಯ ಮುಗಿಸುವಿರಿ. ಖರೀದಿ ಹುಮ್ಮಸ್ಸು. ಅವಿವಾಹಿತರಿಗೆ ಸಂಗಾತಿ ಸಿಗಬಹುದು.
ಕಟಕ
ಧಾವಂತದ ದಿನ. ಪ್ರತಿಕ್ಷಣ ಒತ್ತಡ. ನಿಮ್ಮ ಕಾರ್ಯ ಮೆಚ್ಚುಗೆಗೂ ಪಾತ್ರ. ವೃತ್ತಿ ಸಂಬಂಧ ಪ್ರಯಾಣ ಸಂಭವ. ಆಪ್ತರ ಸಾಹಚರ್ಯ.
ಸಿಂಹ
ನಿಮ್ಮ ಪರಿಶ್ರಮಕ್ಕೆ ಸೂಕ್ತ ಫಲ ಪಡೆಯುವ ಕಾಲ ಬಂದಿದೆ. ಕುಟುಂಬದಲ್ಲಿ ಭಿನ್ನಮತ ಸಂಭವ. ದೇಹಾಲಸ್ಯ ಕಾಡಬಹುದು..
ಕನ್ಯಾ
ಕುಟುಂಬ ಸದಸ್ಯರ ಒಳಿತಿಗೆ ಶ್ರಮಿಸುವಿರಿ. ನಿಮ್ಮ ಕುರಿತಂತೆಯೆ ಅಂತರ್ಮಥನ. ಆರ್ಥಿಕ ಸ್ಥಿತಿ ಉತ್ತಮ. ಆದರೂ ಖರ್ಚು ಹೆಚ್ಚಿದ ಚಿಂತೆ.
ತುಲಾ
ಒತ್ತಡದಿಂದ ನಿರಾಳತೆ. ಸಮಸ್ಯೆ ಯೊಂದು ಪರಿಹಾರದ ಸಾಧ್ಯತೆ. ಆಪ್ತರಿಂದ ಬೆಂಬಲ. ಆತ್ಮೀಯರ ಜತೆ ಆತ್ಮೀಯ ಕಾಲಕ್ಷೇಪ.
ವೃಶ್ಚಿಕ
ಸುಲಭದಲ್ಲಿ ಕಾರ್ಯ ಸಾಧ್ಯ. ಸಮಸ್ಯೆಗೆ ತಕ್ಷಣವೇ ಸ್ಪಂದಿಸುವ ನಿಮ್ಮ ವೈಖರಿ ಯಶಸ್ಸು ತರಲಿದೆ. ಆಹಾರದಲ್ಲಿ ಹಿತಮಿತ ಸಾಧಿಸಿರಿ. ಖರ್ಚು ಹಿಡಿತ.
ಧನು
ಯಶಸ್ವೀ ದಿನ. ಉದ್ದೇಶ ಈಡೇರಿಕೆ. ವೃತ್ತಿಯಲ್ಲಿ ಉನ್ನತಿ. ಮನಸ್ತಾಪ ಇದ್ದವರ ಜತೆ ಸಂಬಂಧ ಸುಧಾರಣೆ. ಆರೋಗ್ಯ ಸುಸ್ಥಿರ.
ಮಕರ
ನಿಂತ ನೀರಾಗಬೇಡಿ. ಹೊಸತನಕ್ಕೆ ತುಡಿಯಿರಿ. ವಾಗ್ವಾದದಿಂದ ದೂರವಿರಿ. ಆರೋಗ್ಯ ಸಮಸ್ಯೆ ಕಾಡಬಹುದು. ಆರ್ಥಿಕ ಒತ್ತಡ ಹೆಚ್ಚಲಿದೆ.
ಕುಂಭ
ದೀರ್ಘಕಾಲದ ಸಮಸ್ಯೆಯೊಂದಕ್ಕೆ ಬೇಗನೆ ಪರಿಹಾರ ಸಿಗಲಿದೆ. ಸ್ವಲ್ಪ ಮಟ್ಟಿನ ನಷ್ಟವೂ ಆದೀತು. ಬದಲಾವಣೆಗೆ ಹೊಂದಿಕೊಳ್ಳಿ.
ಮೀನ
ನಿಮ್ಮ ಕೆಲಸ ತಕ್ಷಣಕ್ಕೆ ಫಲ ನೀಡದು. ಸರಿಯಾದ ಯೋಜನೆ ಮುಖ್ಯ. ಖಾಸಗಿ ಬದುಕಲ್ಲಿ ಸಂವಹನ ಕೊರತೆ. ಭಿನ್ನಮತ ಸಂಭವ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !