ಕಾಂತಿಯುತ ಮತ್ತು ಆರೋಗ್ಯಕರ ತ್ವಚೆ ಪಡೆಯಲು ಕೇವಲ ದುಬಾರಿ ಸ್ಕಿನ್ ಕೇರ್ ಉತ್ಪನ್ನಗಳನ್ನೇ ಅವಲಂಬಿಸಬೇಕಿಲ್ಲ. ನಮ್ಮ ದೈನಂದಿನ ಆಹಾರ ಪದ್ಧತಿಯೂ ತ್ವಚೆಯ ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ.
ದೇಹದ ಒಳಗಿನ ಆರೋಗ್ಯ ಉತ್ತಮವಾಗಿದ್ದರೆ ಅದರ ಪ್ರತಿಫಲ ಮುಖದ ಮೇಲೂ ಕಾಣಿಸುತ್ತದೆ. ಈ ನಿಟ್ಟಿನಲ್ಲಿ ಕೆಲವರಿಗೆ ಗ್ಲುಟನ್-ಮುಕ್ತ (Gluten-Free) ಆಹಾರ ಪದ್ಧತಿ ತ್ವಚೆಯ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು.
Gluten-Free ಆಹಾರ ಎಂದರೇನು?
ಗೋಧಿ, ಬಾರ್ಲಿ,ಅಕ್ಕಿ ಮುಂತಾದ ಧಾನ್ಯಗಳಲ್ಲಿ ಕಂಡುಬರುವ ಪ್ರೋಟೀನ್ ಅನ್ನು ಗ್ಲುಟನ್ ಎಂದು ಕರೆಯಲಾಗುತ್ತದೆ. ಗ್ಲುಟನ್‌ಗೆ ಸೂಕ್ಷ್ಮತೆ ಇರುವವರಿಗೆ ಇದರಿಂದ ಉಬ್ಬರ, ಜೀರ್ಣಕ್ರಿಯೆ ಸಮಸ್ಯೆ ಹಾಗೂ ಕೆಲವೊಮ್ಮೆ ತ್ವಚೆಯ ಸಮಸ್ಯೆಗಳೂ ಕಾಣಿಸಬಹುದು. ಇಂತಹವರು ಗ್ಲುಟನ್ ಕಡಿಮೆ ಇರುವ ಆಹಾರ ಸೇವಿಸಿದಾಗ ದೇಹದಲ್ಲಿ ಉತ್ತಮ ಬದಲಾವಣೆಗಳನ್ನು ಗಮನಿಸಬಹುದು.
ಹಣ್ಣುಗಳು ಮತ್ತು ತರಕಾರಿಗಳು
ಬೆರ್ರಿ ಹಣ್ಣುಗಳು, ಕಿತ್ತಳೆ, ಸೇಬು, ಕ್ಯಾರೆಟ್, ಬೀಟ್ರೂಟ್, ಪಾಲಕ್ ಮುಂತಾದವುಗಳಲ್ಲಿ ಆ್ಯಂಟಿಆಕ್ಸಿಡೆಂಟ್‌ಗಳು ಹೆಚ್ಚಾಗಿದ್ದು, ತ್ವಚೆಯನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತವೆ.
ನಟ್ಸ್ ಮತ್ತು ಬೀಜಗಳು
ಬಾದಾಮಿ, ವಾಲ್‌ನಟ್, ಚಿಯಾ ಬೀಜ, ಫ್ಲ್ಯಾಕ್ಸ್ ಸೀಡ್ಸ್‌ಗಳಲ್ಲಿ ಉತ್ತಮ ಕೊಬ್ಬು ಹಾಗೂ ವಿಟಮಿನ್‌ಗಳು ಇರುತ್ತವೆ. ಇವು ತ್ವಚೆಯ ತೇವಾಂಶ ಕಾಪಾಡಲು ನೆರವಾಗುತ್ತವೆ.
ಇದನ್ನೂ ಓದಿ:
ಸಿರಿಧಾನ್ಯಗಳು (Millets)
ರಾಗಿ, ಜೋಳ, ನವಣೆ, ಸಜ್ಜೆ ಮುಂತಾದ ಸಿರಿಧಾನ್ಯಗಳು ಗ್ಲುಟನ್-ಮುಕ್ತವಾಗಿದ್ದು, ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತವೆ.
ಪ್ರೋಟೀನ್ ಸಮೃದ್ಧ ಆಹಾರ
ಮೊಟ್ಟೆ, ಬೇಳೆಕಾಳುಗಳು, ಪನೀರ್, ಮೊಸರು ಮುಂತಾದ ಪ್ರೋಟೀನ್ ಮೂಲಗಳು ತ್ವಚೆಯ ಕೋಶಗಳ ಪುನರ್ ನಿರ್ಮಾಣಕ್ಕೆ ಸಹಾಯ ಮಾಡುತ್ತವೆ.
ಸಾಕಷ್ಟು ನೀರು ಸೇವನೆ
ಯಾವುದೇ ಆಹಾರ ಪದ್ಧತಿಯ ಜೊತೆಗೆ ದೇಹವನ್ನು ಹೈಡ್ರೇಟ್ ಆಗಿಡುವುದು ಮುಖ್ಯ. ಸಾಕಷ್ಟು ನೀರು ಕುಡಿಯುವುದರಿಂದ ತ್ವಚೆಯ ನೈಸರ್ಗಿಕ ಹೊಳಪು ಹೆಚ್ಚಾಗುತ್ತದೆ.



