April 29, 2026
Wednesday, April 29, 2026
spot_img

VIRAL | ಪ್ರೆಸ್‌ ಮೀಟ್‌ ನಡೆಯುತ್ತಿದ್ದಾಗಲೇ ಕುಸಿದು ಬಿದ್ದ ಆರೋಗ್ಯ ಸಚಿವೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪ್ರೆಸ್‌ ಮೀಟ್‌ ನಡೆಯುತ್ತಿದ್ದ ವೇಳೆ ಸ್ವೀಡನ್‌ನ ನೂತನ ಆರೋಗ್ಯ ಸಚಿವೆ ಎಲಿಸಬೆಟ್ ಲ್ಯಾನ್ ವೇದಿಕೆಯಲ್ಲೇ ಕುಸಿದು ಬಿದ್ದ ಘಟನೆ ನಡೆದಿದೆ. ಲ್ಯಾನ್‌ ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ಈ ಘಟನೆ ಸಂಭವಿಸಿದಿದೆ.

ಸುದ್ದಿಗೋಷ್ಠಿಯಲ್ಲಿ 48 ವರ್ಷದ ಎಲಿಸಬೆಟ್ ಲ್ಯಾನ್, ಸ್ವೀಡಿಷ್ ಪ್ರಧಾನಿ ಉಲ್ಫ್ ಕ್ರಿಸ್ಟರ್ಸನ್ ಹಾಗೂ ಕ್ರಿಶ್ಚಿಯನ್ ಡೆಮಾಕ್ರಟಿಕ್ ಪಕ್ಷದ ನಾಯಕಿ ಎಬ್ಬಾ ಬುಷ್ ಪಕ್ಕದಲ್ಲಿ ನಿಂತಿದ್ದರು. ಪತ್ರಕರ್ತರು ಪ್ರಶ್ನೆ ಕೇಳುತ್ತಿರುವಾಗಲೇ ವೇದಿಕೆಯಿಂದ ಗಾಜಿನ ಪೋಡಿಯಂ ಸಮೇತ ಕುಸಿದುಬಿದ್ದಿದ್ದಾರೆ.

ಎಲಿಸಬೆಟ್ ಲ್ಯಾನ್ ನೂತನ ಆರೋಗ್ಯ ಸಚಿವೆಯಾಗಿ ಅಧಿಕಾರ ಸ್ವೀಕರಿಸಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಪ್ರೆಸ್‌ಮೀಟ್‌ ಆಯೋಜನೆ ಮಾಡಲಾಗಿತ್ತು. ಸುದ್ದಿಗೋಷ್ಠಿಯಲ್ಲಿ ಅಧಿಕಾರಿಯೊಬ್ಬರ ಮಾತುಗಳನ್ನು ಆಲಿಸುತ್ತಿದ್ದರು. ಹಾಗೆಯೇ ಮುಂದಕ್ಕೆ ಬಾಗುತ್ತಲೇ ಪೋಡಿಯಂ ಸಮೇತ ನೆಲಕ್ಕೆ ಕುಸಿದು ಬಿದ್ದರು. ಈ ದೃಶ್ಯ 16 ಸೆಕೆಂಡುಗಳ ವಿಡಿಯೋನಲ್ಲಿ ಸೆರೆಯಾಗಿದೆ. ಸೋಷಿಯಲ್‌ ಮೀಡಿಯಾದಲ್ಲೂ ವಿಡಿಯೋ ವೈರಲ್‌ ಆಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !