ಹೊಸದಿಗಂತ ಡಿಜಿಟಲ್ ಡೆಸ್ಕ್:
ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ನಾಗರಿಕರಿಗೆ ರಾಜ್ಯ ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ. 2002ರ ಸ್ವಯಂ ಹಾಗೂ ಪೋಷಕರ ವಿವರಗಳನ್ನು ನಮೂನೆಯಲ್ಲಿ ಭರ್ತಿ ಮಾಡುವುದು ಕಡ್ಡಾಯವಲ್ಲ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ತಿಳಿಸಿದ್ದಾರೆ.
ಆನ್‌ಲೈನ್ ಮೂಲಕವೂ ಅರ್ಜಿ ಸಲ್ಲಿಕೆ
ನಾಗರಿಕರು ಪಡೆದಿರುವ ಭೌತಿಕ ನಮೂನೆಯನ್ನು ಆನ್‌ಲೈನ್ ಮೂಲಕವೂ ಸಲ್ಲಿಸಬಹುದು. 2002ರ ದಾಖಲೆಗಳು ಇಲ್ಲದಿದ್ದರೂ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಅಗತ್ಯವಿದ್ದಲ್ಲಿ ನಂತರ ದಾಖಲೆಗಳನ್ನು ನೀಡುವಂತೆ ಸೂಚಿಸಲಾಗುತ್ತದೆ.
ಆ.8ರೊಳಗೆ ಸಲ್ಲಿಕೆ ಕಡ್ಡಾಯ
ಮತದಾರರು ತಮ್ಮ ನಮೂನೆಗಳನ್ನು 2026ರ ಆಗಸ್ಟ್ 8ರೊಳಗೆ ಸಲ್ಲಿಸಬೇಕು. ದಾಖಲೆಗಳ ಪರಿಶೀಲನೆಗೆ ಸಂಬಂಧಿಸಿದಂತೆ ಅಂತಿಮ ನಿರ್ಧಾರವನ್ನು ಚುನಾವಣಾ ನೋಂದಣಿ ಅಧಿಕಾರಿ (ERO) ಕೈಗೊಳ್ಳಲಿದ್ದಾರೆ.
ಇದನ್ನೂ ಓದಿ:
44.84 ಲಕ್ಷ ಮತದಾರರ ಪರಿಶೀಲನೆ
ಜುಲೈ 22ರವರೆಗಿನ ಪರಿಶೀಲನೆಯಲ್ಲಿ ಒಟ್ಟು 44.84 ಲಕ್ಷ ಮತದಾರರನ್ನು ASDDO (ಗೈರುಹಾಜರು, ಸ್ಥಳಾಂತರ, ಮೃತಪಟ್ಟವರು, ನಕಲಿ ಹಾಗೂ ಇತರೆ) ವರ್ಗದಲ್ಲಿ ಗುರುತಿಸಲಾಗಿದೆ. ಇದರಲ್ಲಿ ಸ್ಥಳಾಂತರಗೊಂಡವರು, ಮೃತಪಟ್ಟವರು ಹಾಗೂ ಬೇರೆಡೆ ನೋಂದಾಯಿತರಾದವರ ಮಾಹಿತಿಯನ್ನು ಬೂತ್ ಮಟ್ಟದ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ತಾಂತ್ರಿಕ ದೋಷಗಳಿಗೆ ಪರಿಹಾರ
ಮತದಾರರ ಮಾಹಿತಿ ವ್ಯತ್ಯಾಸಕ್ಕೆ ಸಂಬಂಧಿಸಿದ ಕೆಲವು ದೂರುಗಳನ್ನು ಪರಿಹರಿಸಲಾಗಿದೆ. PDF ಕಡತಗಳನ್ನು Excelಗೆ ಪರಿವರ್ತಿಸುವ ವೇಳೆ ಉಂಟಾದ ತಾಂತ್ರಿಕ ಸಮಸ್ಯೆಯಿಂದ ಕೆಲವು ದೋಷಗಳು ಕಂಡುಬಂದಿವೆ ಎಂದು ಚುನಾವಣಾ ಇಲಾಖೆ ತಿಳಿಸಿದೆ.



