September 15, 2026
Tuesday, September 15, 2026
spot_img

ದರ ಹೆಚ್ಚಳದ ಬಿಸಿಯಲ್ಲಿ ಕರಗುತ್ತಿದೆ ‘ಬೆಣ್ಣೆ’ ಜೊತೆಗೆ ‘ತುಪ್ಪ’ವೂ ದುಬಾರಿ: ಏರಿಕೆಯಾಗಿದ್ದೆಷ್ಟು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಜನಸಾಮಾನ್ಯರಿಗೆ ಇದೀಗ ಕೆಎಂಎಫ್‌ ನಂದಿನಿ ಮತ್ತೊಂದು ಶಾಕ್ ನೀಡಿದೆ. ನಂದಿನಿ ಬ್ರ್ಯಾಂಡ್‌ನ ತುಪ್ಪ ಹಾಗೂ ಬೆಣ್ಣೆ ದರವನ್ನು ಹೆಚ್ಚಿಸಲಾಗಿದ್ದು, ಪರಿಷ್ಕೃತ ದರಗಳು ಶೀಘ್ರದಲ್ಲೇ ಜಾರಿಗೆ ಬರಲಿವೆ.

ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ (KMF) ತುಪ್ಪದ ದರವನ್ನು 15 ಹಾಗೂ ಬೆಣ್ಣೆಯ ದರವನ್ನು 22ರಷ್ಟು ಹೆಚ್ಚಿಸಿದೆ. ಈ ದರ ಏರಿಕೆಯಿಂದ ಗೃಹ ಬಳಕೆದಾರರ ಜೊತೆಗೆ ಸಿಹಿ ತಿನಿಸು ತಯಾರಕರು ಮತ್ತು ಹೋಟೆಲ್ ಉದ್ಯಮದ ಮೇಲೂ ಹೆಚ್ಚುವರಿ ಹೊರೆ ಬೀಳುವ ಸಾಧ್ಯತೆ ಇದೆ.

ಇದನ್ನೂ ಓದಿ:

ಪರಿಷ್ಕೃತ ದರದ ಪ್ರಕಾರ ನಂದಿನಿ ತುಪ್ಪದ ಬೆಲೆ 700ರಿಂದ 715ಕ್ಕೆ ಏರಿಕೆಯಾಗಿದೆ. 1 ಕೆಜಿ ಬೆಣ್ಣೆಯ ದರ 610ರಿಂದ 660ಕ್ಕೆ ಹೆಚ್ಚಾಗಿದ್ದು, ಒಟ್ಟಾರೆ 50ರಷ್ಟು ಏರಿಕೆ ಕಂಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !