July 24, 2026
Friday, July 24, 2026
spot_img

ಅಜ್ಜಿ ತಿಥಿಗಾದ್ರೂ ಪ್ರಜ್ವಲ್‌ ರೇವಣ್ಣರನ್ನು ಕರೆತರಲು ಯತ್ನ: ಪೆರೋಲ್‌ ನೀಡೋದಿಲ್ಲ ಎಂದ ಕಾರಾಗೃಹ ಇಲಾಖೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮನೆಗೆಲಸದ ಮಹಿಳೆ ಮೇಲೆ ಹಲವು ಬಾರಿ ಅತ್ಯಾಚರ ಎಸಗಿದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಪೆರೋಲ್‌ ನೀಡಲು ಸಧ್ಯವಿಲ್ಲ ಎಂದು ಕಾರಾಗೃಹ ಹೇಳಿದೆ.

ಇತ್ತೀಚೆಗೆ ನಿಧನರಾದ ಪ್ರಜ್ವಲ್‌ ರೇವಣ್ಣ ಅವರ ಅಜ್ಜಿ ಹಾಗೂ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ಪತ್ನಿ ಚೆನ್ನಮ್ಮ ಅವರ ತಿಥಿಯ ದಿನ ಪೂಜೆ ಸಲ್ಲಿಸೋದಕ್ಕೆ ಜೈಲಿನಿಂದ ಅವರನ್ನು ಕರೆತರುವುದಕ್ಕೆ ಕುಟುಂಬಸ್ಥರು ಯತ್ನಿಸುತ್ತಿದ್ದಾರೆ. ಆದರೆ ಕಾರಾಗೃಹ ಇಲಾಖೆ, ಮಾಜಿ ಸಂಸದನಿಗೆ ಪೆರೋಲ್ ನೀಡಲು ಸಾಧ್ಯವಿಲ್ಲ ಮತ್ತು ತಮ್ಮ ಅಧಿಕಾರ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದೆ.

ಇದೀಗ ಪ್ರಜ್ವಲ್ ಅವರ ಕುಟುಂಬ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದ್ದು, 15 ದಿನಗಳ ಕಾಲ ಪೆರೋಲ್ ಸಿಕ್ಕರೆ ಜುಲೈ 30ಕ್ಕೆ ನಿಗದಿಯಾಗಿರುವ ಅಜ್ಜಿಯ ಪುಣ್ಯ ತಿಥಿಯಲ್ಲಿ ಭಾಗವಹಿಸಲಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !