ಹೊಸದಿಗಂತ ವರದಿ ಕಾರವಾರ:
ಪಿಕಪ್ ರಿಕ್ಷಾ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ತಾಲೂಕಿನ ಉಳಗಾದ ಬಸುಣಗ ಬಳಿ ಸಂಭವಿಸಿದೆ.
ಶಾಲಾ ವಾಹನವೊಂದರ ಚಾಲಕನಾಗಿ ಕೆಲಸ ಮಾಡುತ್ತಿದ್ದ ಓತಿಭಾಗ ನಿವಾಸಿ ಪ್ರಸಾದ ರಾಜೇಶ ಕುಡ್ತರಕರ್(22)ಮೃತ ದುರ್ದೈವಿ. ಈತ ತನ್ನ ಬಜಾಜ ಫಲ್ಸರ್ ಬೈಕ್ ಮೇಲೆ ಬುಸುಣಗದಿಂದ ಉಳಗಾ ಕಡೆ ತೆರಳುತ್ತಿದ್ದ ಸಂದರ್ಭದಲ್ಲಿ ಒಳ ರಸ್ತೆಯ ತಿರುವಿನಲ್ಲಿ ಗೂಡ್ಸ್ ರಿಕ್ಷಾ ಎದುರು ಬಂದಿದ್ದರಿಂದ ಮುಖಾಮುಖಿ ಡಿಕ್ಕಿ ಸಂಭವಿಸಿತ್ತು.
ಇದನ್ನೂ ಓದಿ:
ಗಂಭೀರ ಗಾಯಗೊಂಡ ವ್ಯಕ್ತಿಯನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಸಾಗಿಸುತ್ತಿದ್ದ ಸಂದರ್ಭದಲ್ಲಿ ಮಾರ್ಗ ಮಧ್ಯದಲ್ಲಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಈ ಕುರಿತು ಕದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



