July 24, 2026
Friday, July 24, 2026
spot_img

‘ದಿ ಆಡಸ್ಸಿ’ ಕಲೆಕ್ಷನ್ ಅಬ್ಬರ: ಬಿಡುಗಡೆಯಾದ ಒಂದೇ ವಾರದಲ್ಲಿ ಬ್ಲಾಕ್‌ಬಸ್ಟರ್ ರೆಕಾರ್ಡ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಸಿದ್ಧ ನಿರ್ದೇಶಕ ಕ್ರಿಸ್ಟೋಫರ್ ನೊಲನ್ ನಿರ್ದೇಶನದ ‘ದಿ ಆಡಸ್ಸಿ’ ಚಿತ್ರ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಸಂಪೂರ್ಣವಾಗಿ ಐಮ್ಯಾಕ್ಸ್ (IMAX) ತಂತ್ರಜ್ಞಾನದಲ್ಲೇ ಮೂಡಿಬಂದಿರುವ ಈ ಮಲ್ಟಿಸ್ಟಾರರ್ ಸಿನಿಮಾ ಬಿಡುಗಡೆಯಾದ ಕೇವಲ 7 ದಿನಗಳಲ್ಲಿ ವಿಶ್ವದಾದ್ಯಂತ ಬರೋಬ್ಬರಿ 4000 ಕೋಟಿ ರೂಪಾಯಿ ಗಳಿಸಿ ಹೊಸ ಇತಿಹಾಸ ಸೃಷ್ಟಿಸಿದೆ.

ಭಾರತದಲ್ಲೂ 100 ಕೋಟಿ ಗಳಿಕೆಯ ಸಾಧನೆ

ಟಾಮ್ ಹಾಲೆಂಡ್, ಮ್ಯಾಟ್ ಡೇಮನ್, ಅನ್ನಾ ಹಾಥ್‌ವೇ ಹಾಗೂ ಜೆಂಡೆಯಾ ನಟನೆಯ ಈ ಹಾಲಿವುಡ್ ಚಿತ್ರ ಭಾರತೀಯ ಪ್ರೇಕ್ಷಕರನ್ನು ಕವರ್ಚಿಸಿದೆ. ವಾರಾಂತ್ಯದ ಮೊದಲ 3 ದಿನಗಳಲ್ಲೇ 60 ಕೋಟಿಗೂ ಅಧಿಕ ಗಳಿಸಿದ್ದ ಈ ಸಿನಿಮಾ, ವಾರದ ದಿನಗಳಲ್ಲೂ ಉತ್ತಮ ಪ್ರದರ್ಶನ ಕಾಣುವ ಮೂಲಕ ಭಾರತದಲ್ಲಿ 100 ಕೋಟಿ ರೂಪಾಯಿ ಗಳಿಸಿದ ವಿರಳ ಹಾಲಿವುಡ್ ಚಿತ್ರಗಳ ಸಾಲಿಗೆ ಸೇರಿದೆ.

ಮುಂದಿದೆ ‘ಸ್ಪೈಡರ್‌ಮ್ಯಾನ್’ ಕಠಿಣ ಸವಾಲು

ಉತ್ತರ ಅಮೆರಿಕ ಮತ್ತು ಕೆನಡಾದಲ್ಲೇ 1800 ಕೋಟಿಗೂ ಹೆಚ್ಚು ಬಾಚಿರುವ ಈ ಚಿತ್ರದ ಕಲೆಕ್ಷನ್ ಇದೀಗ ತುಸು ಮಂದಗತಿಯಲ್ಲಿದೆ. ಜುಲೈ 30ರಂದು ತೆರೆಕಾಣಲಿರುವ ‘ಸ್ಪೈಡರ್​​ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಸಿನಿಮಾದ ಭಾರಿ ಅಡ್ವಾನ್ಸ್ ಬುಕಿಂಗ್ ಶುರುವಾಗಿದ್ದು, ಈ ಹೊಸ ಚಿತ್ರದ ಬಿಡುಗಡೆಯು ‘ದಿ ಆಡಸ್ಸಿ’ ಸಿನಿಮಾದ ಬಾಕ್ಸ್ ಆಫೀಸ್ ಓಟಕ್ಕೆ ತಡೆಯೊಡ್ಡುವ ಸಾಧ್ಯತೆಯಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !