ಹೊಸದಿಗಂತ ವರದಿ ಹುಬ್ಬಳ್ಳಿ
ಹುಬ್ಬಳ್ಳಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧಿಸಿ ಶಿಕ್ಷಣ ಸಚಿವ ಧಮೇಂದ್ರ ಪ್ರಧಾನ ರಾಜೀನಾಮೆ ನೀಡಬೇಕು ಎಂಬ ಬೇಡಿಕೆ ಹೊರತಾಗಿ ವಿದ್ಯಾರ್ಥಿಗಳ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಶ್ನೆ ಪತ್ರಿಕೆ ಸೋರಿಕೆ ಸಮಗ್ರ ತನಿಖೆಯಾಗಬೇಕು, ಮಾಡಿದವರಿಗೆ ಕಠಿಣ ಶಿಕ್ಷೆಗೆ ಒಳಪಡಿಸಬೇಕು, ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿಗಳಿಗೆ 1ಕೋಟಿ ಪರಿಹಾರ ನೀಡಬೇಕು. ಪ್ರತಿಭಟನೆ ಹಿನ್ನೆಲೆ ಬಂಧಿಸಿದ ವಿದ್ಯಾರ್ಥಿಗಳು ತಕ್ಷಣ ಬಿಡುಗಡೆ ಮಾಡಬೇಕು ಎಂದರು.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹೆಸರಿನಲ್ಲಿ ನಡೆಯುತ್ತಿರುವ ಇತರ ಚಟುವಟಿಕೆಗಳು, ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಪಕ್ಷಗಳು ಹಾಗೂ ಶಕ್ತಿಗಳು ಕೈ ಜೋಡಿಸಿರುವುದು ಅಕ್ಷಮ್ಯ ಅಪರಾಧ. ಕಾಂಗ್ರೆಸ್ಗೆ ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲಿಸುವ ನೈತಿಕತೆ ಇಲ್ಲ. 60 ವರ್ಷ ಆಡಳಿತ ಮಾಡಿದ ಕಾಂಗ್ರೆಸ್ ಶಿಕ್ಷಣಕ್ಕೆ ನಿಮ್ಮ ಕೊಡುಗೆ ಏನು? ಕೋಮು ಗಲಭೆ ಮಾಡಿದ ಮತಾಂಧರರ ಕುರಿತು ಪಠ್ಯ ಪುಸ್ತಕದಲ್ಲಿ ತುಂಬಿ ಶಿಕ್ಷಣ ವ್ಯವಸ್ಥೆ ಹಾಳು ಮಾಡಿದ್ದಾರೆ ಎಂದು ಹೇಳಿದರು.
ಪ್ರಶ್ನೆ ಪತ್ರಿಕೆ ಸಾಕಷ್ಟು ಬಾರಿ ಸೋರಿಕೆಯಾಗಿದೆ. ಆಗ ಕಾಂಗ್ರೆಸ್ ಕಾನೂನು ಜಾರಿಗೆ ಏಕೆ ಮಾಡಲಿಲ್ಲ. ಮೋದಿ ಸರ್ಕಾರ ಮಸೂದೆ ಜಾರಿಗೆ ತಂದಿದ್ದು, ಸ್ವಾಗತಾರ್ಹ. ಕೆಲವು ಕಮ್ಯುನಿಷ್ಟ ಪಕ್ಷಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ವಿದ್ಯಾರ್ಥಿಗಳ ಬೆಂಬಲಕ್ಕೆ ಬಂದಿದ್ದಾರೆ ಎಂದು ಹರಿಹಾಯ್ದರು.
ಭಾರತ ತುಕಡೆ ಮಾಡುವವರು ಯಾರು? ಕಾಶ್ಮೀರ ಅಜಾದಿ ಘೋಷಣೆ, ಕೆನಡಾ, ಪಾಕಿಸ್ತಾನ, ನೇಪಾಳ ಇಲ್ಲಿಯ ಹೋರಾಟಕ್ಕೆ ಯಾಕೇ ಬೆಂಬಲ ನೀಡುತ್ತಿವೆ. ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಎರಡುವರೆ ಸಾವಿರ ಜಾಸ್ತಿ ಅಪರಾದಿಗಳು ಹೋರಾಟದಲ್ಲಿ ಭಾಗವಹಿಸಿದ್ದಾರೆ. ಇವರ ಉದ್ದೇಶ ವಿದ್ಯಾರ್ಥಿಗಳ ಹಿತವಲ್ಲ. ಹಿಂದೂ, ಆರ್ಎಸ್ಎಸ್ ಹಾಗೂ ಮೋದಿ ಸರ್ಕಾರ ಗುರಿಯಾಗಿಸಿಕೊಂಡು ಮಾಡುತ್ತಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ:
ರಾಜ್ಯದ ಕಾಂಗ್ರೆಸ್ ಶಾಲೆ ಮುಚ್ಚಿದ್ದು, ಅತಿಥಿ ಶಿಕ್ಷಕರಿಗೆ ಸಂಬಳ ನೀಡದ ಇವರು ಹೋರಾಟಕ್ಕೆ ಬೆಂಬಲ ನೀಡುವ ನೈತಿಕತೆ ಇಲ್ಲ. ಕೇಂದ್ರ ಸರ್ಕಾರ ದೇಶದಲ್ಲಿ ಆಡಳಿತಕ್ಕೆ ಬಂದ ತಕ್ಷಣ ಕಾನೂನು ತರಬೇಕಿತ್ತು. ಇದರಿಂದ ದೇಶದ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತಿರಲಿಲ್ಲ. ವಿದ್ಯಾರ್ಥಿಗಳ ಸಾವಿಗೆ ಕೇಂದ್ರ ಸರ್ಕಾರ ಹೊಣೆಯಾಗಿದೆ. ಪ್ರಧಾನಿ ಮೋದಿ ಮೌನ ವಹಿಸಿದ್ದು, ಸರಿಯಲ್ಲ ಎಂದು ಹೇಳಿದರು.
ಕಪ್ಪು ಚುಕ್ಕೆ:
ಅಯೋಧ್ಯೆ ಶ್ರೀರಾಮ ಮಂದಿರ ಹುಂಡಿ ಕಳವು ಹಗರಣ ದೇಶದಲ್ಲಿ ಐದನೂರು ವರ್ಷದ ಹೋರಾಟ, ತ್ಯಾಗಕ್ಕೆ ದೊಡ್ಡ ಕಪ್ಪು ಚುಕ್ಕೆ. ತಕ್ಷಣ ತಪಿತಸ್ಥರ ಬಂಧನ ಮಾಡಬೇಕು. ಅಂತವರನ್ನು ಸಾರ್ವಜನಿಕವಾಗಿ ಗುಂಡು ಹಾಕಬೇಕು ಎಂದು ಆಗ್ರಹಿಸಿದರು.



