October 8, 2026
Thursday, October 8, 2026
spot_img

ಜಿಂಬಾಬ್ವೆ ವಿರುದ್ಧದ 2ನೇ ಟಿ20 ಸಮರ: ಇಂದು ಕೂಡ ಅಬ್ಬರಿಸಲಿದ್ದಾರಾ ವೈಭವ್ ಸೂರ್ಯವಂಶಿ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಭಾರತ ಮತ್ತು ಜಿಂಬಾಬ್ವೆ ನಡುವಿನ 2ನೇ ಟಿ20 ಪಂದ್ಯವು ಇಂದು (ಜುಲೈ 25, ಶನಿವಾರ) ಹರಾರೆಯಲ್ಲಿ ನಡೆಯಲಿದ್ದು, ಸರಣಿ ಕೈವಶ ಮಾಡಿಕೊಳ್ಳುವ ಉದ್ದೇಶದೊಂದಿಗೆ ಕಣಕ್ಕಿಳಿಯಲಿರುವ ಭಾರತ ತಂಡದ ಪರ ಯುವ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

ಸರಣಿ ಗೆಲ್ಲುವ ತವಕದಲ್ಲಿ ಭಾರತ:

ಮೊದಲ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ಟೀಮ್ ಇಂಡಿಯಾ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದೆ. ಇಂದು ಗೆದ್ದರೆ ಸರಣಿ ಭಾರತದ ಪಾಲಾಗಲಿದೆ.

ದಾಖಲೆ ವೀರ ವೈಭವ್ ಸೂರ್ಯವಂಶಿ:

ಕೇವಲ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ, ಮೊದಲ ಪಂದ್ಯದಲ್ಲಿ ಕೇವಲ 18 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಅಂತಾರಾಷ್ಟ್ರೀಯ ಟಿ20ಯಲ್ಲಿ ಈ ಸಾಧನೆ ಮಾಡಿದ ವಿಶ್ವದ ಅತ್ಯಂತ ಕಿರಿಯ ಆಟಗಾರ ಎಂಬ ಐತಿಹಾಸಿಕ ದಾಖಲೆ ಬರೆದಿದ್ದಾರೆ. ಈ ಪಂದ್ಯದಲ್ಲೂ ಅವರ ಸ್ಫೋಟಕ ಬ್ಯಾಟಿಂಗ್ ಮೇಲೆ ಭಾರಿ ನಿರೀಕ್ಷೆ ಇದೆ.

ಇದನ್ನೂ ಓದಿ:

ಬೌಲಿಂಗ್‌ನಲ್ಲಿ ಮಯಾಂಕ್ ಯಾದವ್ ಜಾದೂ:

ಮೊದಲ ಟಿ20 ಪಂದ್ಯದಲ್ಲಿ ವೇಗಿ ಮಯಾಂಕ್ ಯಾದವ್ (2/18) ಹಾಗೂ ಪ್ರಿನ್ಸ್ ಯಾದವ್ (2/19) ಜಿಂಬಾಬ್ವೆ ಬ್ಯಾಟರ್‌ಗಳನ್ನು ಕಟ್ಟಿಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.  ಸಿಲಂದರ್ ರಝಾ ಸಾರಥ್ಯದ ಜಿಂಬಾಬ್ವೆ ತಂಡ ಸರಣಿ ಜೀವಂತವಾಗಿರಿಸಿಕೊಳ್ಳಲು ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ.

Must Read