October 15, 2026
Thursday, October 15, 2026
spot_img

ಬೆಂಗಳೂರಿನ ಗ್ಯಾರೇಜ್‌ ಒಂದರಲ್ಲಿ ಭೀಕರ ಅಗ್ನಿ ಅವಘಡ : 20ಕ್ಕೂ ಹೆಚ್ಚು ಕಾರು ಸುಟ್ಟು ಕರಕಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನ ಥಣಿಸಂದ್ರದ ಗ್ಯಾರೇಜ್‌ ಒಂದರಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಸುಮಾರು 20ಕ್ಕೂ ಹೆಚ್ಚು ಕಾರುಗಳು ಹಾಗೂ 8 ಆಟೋಗಳು ಸುಟ್ಟು ಕರಕಲಾಗಿವೆ.

ಥಣಿಸಂದ್ರ ಮುಖ್ಯರಸ್ತೆಯ ಭಾರತಿ ಸಿಟಿ ಬಳಿ ಇರುವ ಗ್ಯಾರೇಜ್‌ನಲ್ಲಿ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದೆ. ಅಗ್ನಿ ಅವಘಡದಲ್ಲಿ ಸಣ್ಣಪುಟ್ಟ ರಿಪೇರಿಗೆ ತಂದಿದ್ದ 20ಕ್ಕೂ ಹೆಚ್ಚು ಕಾರುಗಳು ಸುಟ್ಟು ಕರಕಲಾಗಿವೆ. ಜಾಗ್ವಾರ್, ರೇಂಜ್ ರೋವರ್ ಕಾರುಗಳಿಗೂ ಹಾನಿಯಾಗಿದೆ.

ಗ್ಯಾರೇಜ್‌ನ ಪಕ್ಕದಲ್ಲೇ ಇದ್ದ ಶೆಡ್‌ಗೂ ಬೆಂಕಿ ಹಬ್ಬಿದ್ದು, ಎಂಟು ಆಟೋಗಳು ಅಗ್ನಿಗೆ ಆಹುತಿಯಾಗಿವೆ. ಕಾರು ಗ್ಯಾರೇಜ್ ಸಮೀಪದ ಯುಪಿವಿಸಿ ಕಿಟಕಿ ಫ್ಯಾಕ್ಟರಿಗೂ ಬೆಂಕಿ ತಗುಲಿದೆ. ಇದರಿಂದ ಫ್ಯಾಕ್ಟರಿಯಲ್ಲಿದ್ದ 2 ಲಕ್ಷ ರೂ. ಮೌಲ್ಯದ ಗ್ರಾಹಕರ ಕಿಟಕಿ ವಸ್ತುಗಳು, ಹಾಗೂ 4 ಲಕ್ಷ ರೂ. ಮೌಲ್ಯದ ಫ್ಯಾಕ್ಟರಿ ಯಂತ್ರಕ್ಕೆ ಹಾನಿಯಾಗಿದೆ.

ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿ ಅವಘಡಕ್ಕೆ ಕಾರಣ ತಿಳಿದುಬಂದಿಲ್ಲ.

Must Read