July 27, 2026
Monday, July 27, 2026
spot_img

ಕೆನಡಾದಲ್ಲಿ ಭಾರತೀಯ ಮೂಲದ ಯುವತಿಗೆ ಗುಂಡಿಕ್ಕಿ ಹತ್ಯೆ: ಬ್ರಾಂಪ್ಟನ್ ಮೂಲದ ವ್ಯಕ್ತಿ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೆನಡಾದ ಟೊರೊಂಟೊ ನಗರದಲ್ಲಿ ಭಾರತೀಯ ಮೂಲದ 26 ವರ್ಷದ ನವನೀತ್ ಕೌರ್ ಎಂಬ ಯುವತಿಯನ್ನು ಭೀಕರವಾಗಿ ಗುಂಡಿಕ್ಕಿ ಕೊಲೆ ಮಾಡಲಾಗಿದೆ. ಹಂಬರ್‌ವುಡ್ ಬೌಲೆವಾರ್ಡ್ ಹಾಗೂ ರೆಕ್ಸ್‌ಡೇಲ್ ಬೌಲೆವಾರ್ಡ್ ಜಂಕ್ಷನ್ ಬಳಿ ಈ ದಾರುಣ ಘಟನೆ ಸಂಭವಿಸಿದ್ದು, ಸ್ಥಳೀಯವಾಗಿ ತೀವ್ರ ಆತಂಕ ಸೃಷ್ಟಿಸಿದೆ.

ಮಾತುಕತೆಯ ಬೆನ್ನಲ್ಲೇ ಗುಂಡಿನ ದಾಳಿ

ಪ್ರತ್ಯಕ್ಷದರ್ಶಿಗಳು ನೀಡಿದ ಮಾಹಿತಿಯಂತೆ, ನವನೀತ್ ಕೌರ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅಜ್ಞಾತ ವ್ಯಕ್ತಿಯೊಬ್ಬ ಆಕೆಯನ್ನು ಹಿಂಬಾಲಿಸಿದ್ದಾನೆ. ಕೆಲ ಸಮಯ ಆಕೆಯೊಂದಿಗೆ ಮಾತುಕತೆ ನಡೆಸಿದ ಆತ, ಇದ್ದಕ್ಕಿದ್ದಂತೆ ಪಿಸ್ತೂಲ್‌ನಿಂದ ಗುಂಡು ಹಾರಿಸಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಗಂಭೀರವಾಗಿ ಗಾಯಗೊಂಡ ಯುವತಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾಳೆ.

ಆರೋಪಿ ಶರಣಜಿತ್ ಸಿಂಗ್ ಬಂಧನ

ಘಟನೆ ನಡೆದ ತಕ್ಷಣವೇ ಕಾರ್ಯಾಚರಣೆಗಿಳಿದ ಟೊರೊಂಟೊ ಪೊಲೀಸರು, ಬ್ರಾಂಪ್ಟನ್ ಮೂಲದ 37 ವರ್ಷದ ಶರಣಜಿತ್ ಸಿಂಗ್ ಎಂಬಾತನನ್ನು ಬಂಧಿಸಿದ್ದಾರೆ. ಆರೋಪಿಯ ವಿರುದ್ಧ ಪ್ರಥಮ ಹಂತದ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಸಾರ್ವಜನಿಕರ ನೆರವು ಕೋರಿದ ಪೊಲೀಸರು

ಈ ಕ್ರೂರ ಕೊಲೆಗೆ ನಿಖರ ಕಾರಣವೇನು ಎಂಬ ಬಗ್ಗೆ ತನಿಖೆ ಮುಂದುವರಿದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಹೆಚ್ಚುವರಿ ಮಾಹಿತಿ ಅಥವಾ ಸಾಕ್ಷ್ಯಗಳಿದ್ದರೆ ತಕ್ಷಣ ಪೊಲೀಸರನ್ನು ಅಥವಾ ‘ಕ್ರೈಮ್ ಸ್ಟಾಪರ್ಸ್’ ತಂಡವನ್ನು ಸಂಪರ್ಕಿಸುವಂತೆ ತನಿಖಾಧಿಕಾರಿಗಳು ಮನವಿ ಮಾಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !