October 15, 2026
Thursday, October 15, 2026
spot_img

ಚಿಕ್ಕಬಳ್ಳಾಪುರದಲ್ಲಿ ವಿದೇಶಿ ತಳಿ ರೆಡ್‌ಗ್ಲೋಬ್‌ ದ್ರಾಕ್ಷಿ ಕಳವು: ಐವರು ಆರೋಪಿಗಳ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ತಿಂಗಳುಗಟ್ಟಲೆ ಶ್ರದ್ಧೆಯಿಂದ ಬೆಳೆದಿದ್ದ ಬೆಳೆ ಇನ್ನೇನು ಕಟಾವಿಗೆ ಬಂದಾಗ ಕಳೆದು ಹೋದರೆ!

ಹೌದು, ಟಾವಿಗೆ ಬಂದಿದ್ದ ದುಬಾರಿ ಬೆಲೆಯ ರೆಡ್ ಗ್ಲೋಬ್ ದ್ರಾಕ್ಷಿಯನ್ನು ರಾತ್ರೋರಾತ್ರಿ ಕಳ್ಳರ ಕಟಾವು ಮಾಡ್ಕೊಂಡ್ ಪರಾರಿಯಾಗಿದ್ದರು. ಈ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನಂದಿಗಿರಿಧಾಮ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದು, ಅವರಿಂದ ಎರಡೂವರೆ ಲಕ್ಷ ರೂಪಾಯಿ ನಗದು ಜಪ್ತಿ ಮಾಡಿದ್ದಾರೆ.

ಜುಲೈ 14ರ ರಾತ್ರಿ ನಂದಿಗಿರಿಧಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದ್ರಾಕ್ಷಿ ಕಳವು ಪ್ರಕರಣ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 5 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಕದ್ದ ದ್ರಾಕ್ಷಿಯನ್ನು ಹೋಲ್​ಸೇಲ್ ದರದಲ್ಲಿ ಮಾರಾಟ ಮಾಡಿದ್ದರು. ಅವರಿಂದ 2.5 ಲಕ್ಷ ರೂಪಾಯಿ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ರೈತ ಬಸವರಾಜು ತಮ್ಮ 2.5 ಎಕರೆ ಜಮೀನಿನಲ್ಲಿ ವಿದೇಶಿ ರೆಡ್ ಗ್ಲೋಬ್ ದ್ರಾಕ್ಷಿಯನ್ನು ಬೆಳೆದಿದ್ದಾರೆ. ಇದಕ್ಕೆ ಮಾರುಕಟ್ಟೆಯಲ್ಲಿ ದುಬಾರಿ ಬೆಲೆ ಇದ್ದು, ಕಟಾವಿಗೆ ಬಂದಿದ್ದ ಫಸಲಿನಿಂದ ಭಾರಿ ಲಾಭದ ನಿರೀಕ್ಷೆಯಲ್ಲಿದ್ದರು. ಆದ್ರೆ, ಜುಲೈ 14 ರಾತ್ರಿ 10 ಗಂಟೆ ಸಮಯದಲ್ಲಿ ಕಳ್ಳರು ತೋಟಕ್ಕೆ ನುಗ್ಗಿ ರಾತ್ರೋರಾತ್ರಿ ಸುಮಾರು 3 ಟನ್ ದ್ರಾಕ್ಷಿ ಗೊಂಚಲು ಕಿತ್ಕೊಂಡ್ ಪರಾರಿಯಾಗಿದ್ದರು.

Must Read