ಬೆಳಗಿನ ತಿಂಡಿ ಜೊತೆಗೆ ಪ್ರೋಟೀನ್ ಶೇಕ್ ಕುಡಿಯುವುದು ಆ ದಿನದ ನಿಮ್ಮ ಉತ್ತಮ ನಿರ್ಧಾರವಾಗಿದೆ. ಇಡೀ ದಿನ ನಿಮ್ಮ ಎನರ್ಜಿಯನ್ನು ಪ್ರೋಟೀನ್ ಖಾಯಂ ಮಾಡುತ್ತದೆ. ಬೆಳಗ್ಗೆ ತಿಂಡಿ ತಿಂದು ಒಂದೆರಡು ಗಂಟೆಗೆ ಹಸಿವಾಗಿ ಏನೇನೋ ಜಂಕ್ ತಿನ್ನುವುದನ್ನು ತಪ್ಪಿಸುತ್ತದೆ. ಪ್ರೋಟೀನ್‌ನಲ್ಲಿ ಹೊಟ್ಟೆ ತುಂಬುತ್ತದೆ. ಹಸಿವು ಕಡಿಮೆಯಾಗುತ್ತದೆ.
ದೇಹದಲ್ಲಿರುವ ಹಸಿವಿನ ಹಾರ್ಮೋನ್‌ಗಳಾದ ಪೆಪ್ಟೈಡ್‌ಗಳಿಗೆ ಪ್ರೋಟೀನ್ ಸಿಗ್ನಲ್ ನೀಡುತ್ತದೆ. ಇದರಿಂದಾಗಿ ನಿಮಗೆ ಹಸಿವಾಗುವುದಿಲ್ಲ. ಹೊಟ್ಟೆಗೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ತಿನ್ನುತ್ತೀರಿ.
ಬೆಳಗ್ಗೆ ತಿಂಡಿಯ ಜೊತೆ ಪ್ರೋಟೀನ್ ಕುಡಿಯುವುದರಿಂದ ಇನ್ಸುಲಿನ್ ಸ್ಪೈಕ್ ಆಗೋದಿಲ್ಲ. ಬರೀ ತಿಂಡಿ ಅಥವಾ ಕಾಫಿ ಟೀ ಜೊತೆ ದಿನ ಆರಂಭಿಸಿದರೆ ಸ್ಪೈಕ್ ಖಂಡಿತ.
ಪ್ರೋಟೀನ್‌ನಲ್ಲಿ ಥರ್ಮಿಕ್ ಎಫೆಕ್ಟ್ ಇದೆ. ಇದು ನಿಮ್ಮ ದೇಹದಿಂದ ಫ್ಯಾಟ್ ಹೋಗಿಸಲು ಸಹಕಾರಿಯಾಗುತ್ತದೆ. ಈ ಪ್ರೋಟೀನ್‌ನ್ನು ಜೀರ್ಣ ಮಾಡಿಕೊಳ್ಳೋದಕ್ಕೆ ಕ್ಯಾಲೋರಿ ಖರ್ಚಾಗುತ್ತದೆ.
ಜಿಮ್‌ಗೆ ಹೋಗಿಬಂದವರಿಗೆ ಇದು ಇನ್ನಷ್ಟು ಉತ್ತಮ. ಮಸಲ್ ಬೆಳವಣಿಗೆಗೆ ಇದು ಸಹಾಯ ಮಾಡುತ್ತದೆ. ರಾತ್ರಿಯಿಡೀ ಖಾಲಿ ಇದ್ದ ಹೊಟ್ಟೆಗೆ ಪ್ರೋಟೀನ್ ಕೊಟ್ಟರೆ ಇಡೀ ದಿನ ಎನರ್ಜಿ ಇರುತ್ತದೆ.
ಪ್ರೋಟೀನ್ ಪೌಡರ್ ಶೇಕ್, ಮೂರು ದೊಡ್ಡ ಮೊಟ್ಟೆ, ಗ್ರೀಕ್ ಯೋಗರ್ಟ್, ತೋಫು, ಪನೀರ್ ತಿನ್ನಬಹುದು



