July 28, 2026
Tuesday, July 28, 2026
spot_img

‘ನಮ್ಮ ಎಲಿಜಬೆತ್‌ಗೆ ಹ್ಯಾಪಿ ಬರ್ತ್‌ಡೇ’: ‘ಟಾಕ್ಸಿಕ್’ ತಂಡದಿಂದ ಹುಮಾ ಖುರೇಷಿಗೆ ಸ್ಪೆಷಲ್ ವಿಶ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟಿ ಹುಮಾ ಖುರೇಷಿ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ವಿಶೇಷ ದಿನವನ್ನು ಇನ್ನಷ್ಟು ನೆನಪಿನಲ್ಲಿಡುವಂತೆ, ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರದ ತಂಡ ವಿಶೇಷವಾಗಿ ಶುಭಾಶಯ ಕೋರಿದೆ.

ಚಿತ್ರತಂಡವು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ “Happy Birthday to our Elizabeth” ಎಂದು ಪೋಸ್ಟ್ ಹಂಚಿಕೊಂಡಿದ್ದು, ಚಿತ್ರದ ಪಾತ್ರದ ಹೆಸರಿನಲ್ಲೇ ಹುಮಾಗೆ ಶುಭಾಶಯ ತಿಳಿಸಿದೆ. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳ ಗಮನ ಸೆಳೆದಿದೆ.

12 ವರ್ಷದ ಸಿನಿ ಪಯಣಕ್ಕೆ ಮತ್ತೊಂದು ಮೈಲಿಗಲ್ಲು

ಹುಟ್ಟುಹಬ್ಬಕ್ಕೂ ಮುನ್ನವೇ ಹುಮಾ ಖುರೇಷಿ ಚಿತ್ರರಂಗದಲ್ಲಿ 12 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ವಿಭಿನ್ನ ಪಾತ್ರಗಳ ಮೂಲಕ ಗುರುತಿಸಿಕೊಂಡಿರುವ ಅವರು, ಈಗ ತಮ್ಮ ವೃತ್ತಿಜೀವನವನ್ನು ತಮ್ಮದೇ ರೀತಿಯಲ್ಲಿ ಮುನ್ನಡೆಸುವ ಹಂತಕ್ಕೆ ಬಂದಿರುವುದಾಗಿ ತಿಳಿಸಿದ್ದಾರೆ.

‘ಟಾಕ್ಸಿಕ್’ ಮೇಲೆ ಹೆಚ್ಚಿದ ನಿರೀಕ್ಷೆ

ಗೀತು ಮೋಹನ್‌ದಾಸ್ ನಿರ್ದೇಶನದ ‘ಟಾಕ್ಸಿಕ್’ ಚಿತ್ರದಲ್ಲಿ ಕನ್ನಡದ ನಟ ಯಶ್ ಜೊತೆ ಹುಮಾ ಖುರೇಷಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ವಿಭಿನ್ನ ಲೋಕವನ್ನು ಪ್ರೇಕ್ಷಕರಿಗೆ ಪರಿಚಯಿಸಲಿದೆ ಎಂದು ಹುಮಾ ಹೇಳಿದ್ದು, ಚಿತ್ರದ ಮೇಲಿನ ಕುತೂಹಲ ಮತ್ತಷ್ಟು ಹೆಚ್ಚಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !