July 29, 2026
Wednesday, July 29, 2026
spot_img

ದಿನಭವಿಷ್ಯ: ವೃತ್ತಿರಂಗದಲ್ಲಿ ಇಂದು ಸವಾಲಿನ ವಾತಾವರಣ, ತಾಳ್ಮೆ ವಹಿಸುವುದು ಅತ್ಯಗತ್ಯ

ಮೇಷ
ಇಂದು ಕಠಿಣ ಕೆಲಸ ಕಾದಿದೆ. ಸುಗಮವಾಗಿ ಸಾಗದು. ಮುಕ್ತ ಸಂವಹನ ಅವಶ್ಯ. ಬಿಗು ನಿಲುವು ಬಿಡಿ. ನಿರ್ಲಕ್ಷದಿಂದ ಧನಹಾನಿ ಸಂಭವ.
ವೃಷಭ
 ಕಾಲಮಿತಿಯಲ್ಲಿ ಕೆಲಸ ಪೂರ್ತಿಯಾಗದು. ಸಹನೆ ಕೆಡುವ ಪ್ರಸಂಗ ಉದ್ಭವಿಸಬಹುದು. ಭಾವನಾತ್ಮಕ ಏರುಪೇರು ಉಂಟಾಗಲಿದೆ.            
ಮಿಥುನ
ವೃತ್ತಿಯಲ್ಲಿ -ಲಪ್ರದ ಬೆಳವಣಿಗೆ. ಹಣದ ಕೊರತೆ ಕಾಡದು. ಕೌಟುಂಬಿಕ ಸಾಮರಸ್ಯಕ್ಕೆ ಧಕ್ಕೆ. ಆಹಾರ ದಿಂದ ಹೊಟ್ಟೆ ಕೆಡುವ ಸಾಧ್ಯತೆ.  
ಕಟಕ
    ವೃತ್ತಿಯಲ್ಲಿ ಹೆಚ್ಚುವರಿ ಹೊಣೆ. ದೂರ ಪ್ರಯಾಣ ಸಂಭವ. ಸಂಬಂಧದಲ್ಲಿ ಅಹಂಕಾರ ಸಲ್ಲದು. ವಿನಯದಿಂದ ವ್ಯವಹರಿಸಿ. ಆರ್ಥಿಕ ಉನ್ನತಿ.      
ಸಿಂಹ
  ಸಹೋದ್ಯೋಗಿ ಜತೆ ಸರಿಬರದು. ವಾಗ್ವಾದ ನಡೆದೀತು. ಆತ್ಮೀಯ ಸಂಂಧ ಕೆಡುವಂತಹ ನಡೆನುಡಿ ತೋರಬೇಡಿ. ಹೊಂದಾಣಿಕೆ ಮುಖ್ಯ.                
ಕನ್ಯಾ
ವೃತ್ತಿ ಒತ್ತಡ ಜಾಣ್ಮೆಯಿಂದ ನಿಭಾಯಿಸಿ. ಯೋಜನೆ ಮುಖ್ಯ. ಸಂಗಾತಿ ಜತೆ ಭಿನ್ನಮತ. ಹೆಚ್ಚು ಖರ್ಚು. ಉಳಿತಾಯ ಕಡಿಮೆ.
ತುಲಾ
 ಎಲ್ಲ ದಿಸೆಯಲ್ಲೂ ಪ್ರಗತಿ ಕಾಣುವಿರಿ. ಸಂಬಂಧದಲ್ಲಿ ಸೌಹಾರ್ದ. ಹೊಸ ಹೂಡಿಕೆ ಲಾಭ ತರಲಿದೆ. ಆರೋಗ್ಯ ಸುಸ್ಥಿತಿ, ನಿರಾಳತೆ.  
ವೃಶ್ಚಿಕ
ಎಂದಿಗಿಂತ ಹೆಚ್ಚು ಕಾರ್ಯ. ಇತರರ ಬೇಡಿಕೆ ಈಡೇರಿಸಲು ಹೆಚ್ಚು ಗಮನ ಕೊಡಬೇಕಾಗಿದೆ.ವೃತ್ತಿಯಲ್ಲಿ   ಪೈಪೋಟಿ ಹೆಚ್ಚಲಿದೆ.
ಧನು
  ಈ ದಿನ ನಿಮಗೆ ಮಿಶ್ರ-ಲ. ಖಾಸಗಿ ಬದುಕಿನಲ್ಲಿ ನೆಮ್ಮದಿ. ಸಮಸ್ಯೆ ಪರಿಹಾರ. ಆದರೆ ವೃತ್ತಿ ಬದುಕಿನಲ್ಲಿ ಒತ್ತಡ ಹೆಚ್ಚಲಿದೆ.    
ಮಕರ
ಟೀಕೆಗಳು ಬರದ ರೀತಿ ಕಾರ್ಯವೆಸಗಿ. ಸ್ನೇಹತರು ಹುಟ್ಟಿಕೊಂಡಂತೆ ವಿರೋಽಗಳೂ ಹೆಚ್ಚುವರು. ಸಮಚಿತ್ತ ದಿಂದ ಸ್ವೀಕರಿಸಿ.              
ಕುಂಭ
 ವೃತ್ತಿಯಲ್ಲಿ ಯಶಸ್ಸು. ನಿಮ್ಮ ಆವಶ್ಯಕತೆ ಪೂರೈಸಲಿದೆ. ಆರ್ಥಿಕ ಕೊರತೆ ನೀಗುವುದು. ಬಂಧುಗಳ ಸಹಕಾರದಿಂದ ಕಾರ್ಯ ಸುಗಮ.                  
 ಮೀನ
 ಹಿರಿಯರಿಂದ ಅನಿರೀಕ್ಷಿತ ಲಾಭ ಪಡೆಯುವಿರಿ. ಬಂಧುತ್ವ ವೃದ್ಧಿ. ಭಿನ್ನಮತ ನಿವಾರಣೆ. ಸ್ವಾಸ್ಥ್ಯ ಕುರಿತ ಚಿಂತನೆ ಪರಿಹಾರ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !