July 29, 2026
Wednesday, July 29, 2026
spot_img

ಸೈಲೆಂಟ್ ಮೋಡ್‌ನಲ್ಲಿ ‘ಸಿಂಪಲ್ ಸ್ಟಾರ್’: ರಕ್ಷಿತ್ ಶೆಟ್ಟಿ ಗೈರುಹಾಜರಿ ಹಿಂದಿದೆಯಾ ಮಾಸ್ಟರ್ ಪ್ಲಾನ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಟ-ನಿರ್ದೇಶಕ ರಕ್ಷಿತ್ ಶೆಟ್ಟಿ ಅಭಿನಯದ ‘ರಿಚರ್ಡ್ ಆಂಟನಿ’ ಸಿನಿಮಾ ಘೋಷಣೆಯಾಗಿ ಬಹುಕಾಲ ಕಳೆದರೂ ಚಿತ್ರೀಕರಣ ಆರಂಭವಾಗಿಲ್ಲ. ಹೀಗಾಗಿ ನೆಚ್ಚಿನ ನಟ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಳ್ಳದಿರುವುದು ಅವರ ಅಭಿಮಾನಿಗಳಲ್ಲಿ ಕುತೂಹಲ ಮತ್ತು ಬೇಸರ ಮೂಡಿಸಿತ್ತು.

‘ಮಿಲಿಯನ್ ಡಾಲರ್’ ಪ್ರಶ್ನೆಗೆ ಸಿಕ್ತು ಉತ್ತರ

‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಹಾಗೂ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾಗಳ ಮೂಲಕ ರಕ್ಷಿತ್ ಅವರೊಂದಿಗೆ ಯಶಸ್ಸು ಕಂಡ ನಿರ್ದೇಶಕ ಹೇಮಂತ್ ರಾವ್, ಯೂಟ್ಯೂಬ್ ಸಂದರ್ಶನವೊಂದರಲ್ಲಿ ಈ ಕುರಿತು ಮಾತನಾಡಿದ್ದಾರೆ. ರಕ್ಷಿತ್ ಸದ್ಯ ತೆರೆಮರೆಯಲ್ಲಿ ತಮ್ಮ ಕನಸಿನ ಯೋಜನೆಗಾಗಿ ಅತ್ಯಂತ ಭರ್ಜರಿಯಾಗಿಯೇ ಸಿದ್ಧತೆ ನಡೆಸುತ್ತಿದ್ದಾರೆ ಎಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದ್ದಾರೆ.

ಮೌನವೇ ಸಿನಿಮಾದ ದೊಡ್ಡ ಪ್ರಚಾರ!

ರಕ್ಷಿತ್ ಅವರ ಈ ತಾತ್ಕಾಲಿಕ ಗೈರುಹಾಜರಿಯೇ ‘ರಿಚರ್ಡ್ ಆಂಟನಿ’ ಚಿತ್ರಕ್ಕೆ ಸಿಗುತ್ತಿರುವ ಪ್ರಮುಖ ಪ್ರಚಾರ ತಂತ್ರ ಎಂದಿರುವ ಹೇಮಂತ್, ನಟನ ಸಿನಿಮಾಗಳ ಭಾವನಾತ್ಮಕ ಮೌಲ್ಯ ಮತ್ತು ಕಥೆಯ ವ್ಯಾಪ್ತಿ ದೊಡ್ಡ ಮಟ್ಟದ್ದು ಎಂದು ಹೊಗಳಿದ್ದಾರೆ. ಇಡೀ ಚಿತ್ರರಂಗವೇ ಅವರ ಕಮ್‌ಬ್ಯಾಕ್‌ಗಾಗಿ ಕಾಯುತ್ತಿರುವುದು ಸಿನಿಮಾ ಮೇಲಿರುವ ಅಗಾಧ ನಿರೀಕ್ಷೆಯನ್ನು ತೋರ್ಪಡಿಸುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !