July 29, 2026
Wednesday, July 29, 2026
spot_img

ಕುಡಿಯೋಕೆ ನೀರಿಲ್ಲದಾಗ 3,500 ಸಾವಿರ ಕ್ಯೂಸೆಕ್ ನೀರು ಕೊಡಿ ಅಂದ್ರೆ ಹೇಗೆ? ಡಿಸಿಎಂ ಕಿಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಮಗೇ ಕುಡಿಯೋಕೆ ನೀರಿಲ್ಲ ಇನ್ನು 3,500 ಸಾವಿರ ಕ್ಯೂಸೆಕ್ ನೀರು ಕೊಡಿ ಅಂದ್ರೆ ಹೇಗೆ? ಎಂದು ಡಿಸಿಎಂ ಪರಮೇಶ್ವರ್ ಗರಂ ಆಗಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿ, ನಮ್ಮ ಹತ್ರ ತುಂಬಿ ತುಳುಕ್ತಾ ಇದೆ ಅಂದ್ರೆ ಇನ್ನೊಬ್ಬರಿಗೂ ಕೊಡಬಹುದು. ಆದರೆ ಕೆಲಸಕ್ಕೆ ಬಿಡಿ, ಕುಡಿಯೋಕೂ ನೀರಿಲ್ಲ ಅಂದಾಗ ಅಷ್ಟೊಂದು ನೀರನ್ನು ಹೇಗೆ ಕೊಡೋದು ಹೇಳಿ? ಈ ಬಗ್ಗೆ ಚರ್ಚೆ ಮಾಡ್ತೀವಿ. ಸಿಎಂ ಸರ್ವಪಕ್ಷದ ಸಭೆ ಕರೀತಾರೆ. ಆಗಸ್ಟ್‌ ಮೂರಕ್ಕೆ ತಮಿಳುನಾಡು ಸಿಎಂ ಕೂಡ ಬರ್ತಾರೆ. ಆಗ ಮುಂದೇನು ಮಾಡಬಹುದು ಅಂತ ಮಾತಾಡ್ತೀವಿ.

ರೈತರಿಗೆ ಸಿಟ್ಟು ಬರೋದ್ರಲ್ಲಿ ಅರ್ಥ ಇದೆ. ನೀರನ್ನೇ ನಂಬಿಕೊಂಡು, ನೀರಿನ ಸುತ್ತ ಜೀವನ ಕಟ್ಟಿಕೊಂಡಿರ್ತಾರೆ. ಮಳೆನಾದ್ರೂ ಬಂದ್ರೆ ಒಂದು ಲೆಕ್ಕ. ರೈತರು ಕೂಡ ಇದೇ ನೀರಿನ ಮೇಲೆ ಅವಲಂಬಿತರಾಗಿದ್ದಾರೆ. ಸರ್ಕಾರ ಏನು ತೀರ್ಮಾನ ಮಾಡತ್ತೋ ನೋಡಣ ಎಂದಿದ್ದಾರೆ.

ಮೇಕೆದಾಟು ಯೋಜನೆಗೆ ಆಕ್ಷೇಪ ಮಾಡುವಂತಿಲ್ಲ ಅಂತ ಸಂಸತ್ ಹೇಳಿದೆ. ಕೋರ್ಟ್ ಏನು ತೀರ್ಮಾನ ಮಾಡುತ್ತದೆ ಅದೇ ಅಂತಿಮ. ಕೋರ್ಟ್ ಈಗಾಗಲೇ ಹೇಳಿದೆ, ಹೀಗಾಗಿ ಅದರಂತೆ ನಡೆಯಬೇಕು. ಜೋಸೆಫ್ ವಿಜಯ್ ಪಿಎಂಗೆ ಪತ್ರ ಬರೆದಿದ್ದಾರೆ, ಬರೆಯಲಿ. ಆದ್ರೆ ಕೋರ್ಟ್ ಏನು ಹೇಳಿದೆಯೋ ಅದೇ ಅಂತಿಮ ಎಂದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !