September 22, 2026
Tuesday, September 22, 2026
spot_img

ಆತಂಕಪಡುವ ವಿಷಯ! ಕರ್ನಾಟಕದಲ್ಲಿಯೇ ಅತಿ ಹೆಚ್ಚು ಬಾಲಕರು ಶಾಲೆ ತೊರೆಯುತ್ತಿದ್ದಾರಂತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ದೇಶದ ಪ್ರಮುಖ ರಾಜ್ಯಗಳ ತುಲನೆಯಲ್ಲಿ ಪ್ರೌಢಶಾಲಾ ಹಂತದಲ್ಲಿ ಶಾಲೆ ತೊರೆಯುವ ಬಾಲಕರ ಸಂಖ್ಯೆ ಕರ್ನಾಟಕದಲ್ಲಿ ಹೆಚ್ಚಾಗಿದೆ.

ಒಂಬತ್ತು ಹಾಗೂ ಹತ್ತನೇ ತರಗತಿ ಬಾಲಕರು ಶಾಲೆ ಬಿಡುತ್ತಿದ್ದು, ಶಿಕ್ಷಣದಲ್ಲಿ ಅತಿ ಹೆಚ್ಚು ಡ್ರಾಪ್ಔಟ್ ದರ ಹೊಂದಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪಟ್ಟಿಯಲ್ಲಿ ರಾಜ್ಯವು ಅತ್ಯಧಿಕ ಸ್ಥಾನದಲ್ಲಿದೆ. ದತ್ತಾಂಶದ ಪ್ರಕಾರ, 2025-2026 ಶೈಕ್ಷಣಿಕ ವರ್ಷದಲ್ಲಿ ಮಾಧ್ಯಮಿಕ ಹಂತದಲ್ಲಿ ಶೇ. 18.1 ರಷ್ಟು ಬಾಲಕ ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿದಿದ್ದಾರೆ.

ಕೇಂದ್ರ ಶಿಕ್ಷಣ ಸಚಿವಾಲಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬಿಡುಗಡೆ ಮಾಡಿದ ರಾಷ್ಟ್ರೀಯ ಶಿಕ್ಷಣ ಕಾರ್ಯಕ್ರಮ ಕಂಪ್ಲೈಂಟ್ ಶಾಲೆಗಳಿಗಾಗಿ ಇತ್ತೀಚೆಗೆ ಬಿಡುಗಡೆಯಾದ ಏಕೀಕೃತ ಜಿಲ್ಲಾ ಮಾಹಿತಿ ವ್ಯವಸ್ಥೆ ಶಿಕ್ಷಣ ಪ್ಲಸ್ ವರದಿಯಲ್ಲಿ ಈ ಮಾಹಿತಿ ಸಿಕ್ಕಿದೆ.

ರಾಜ್ಯದಲ್ಲಿ ಈ ಪ್ರಮಾಣ ವರ್ಷದಿಂದ ವರ್ಷಕ್ಕೆ ಕೊಂಚ ಸುಧಾರಿಸುತ್ತಿದೆಯಾದರೂ, ಇತರೆ ರಾಜ್ಯಗಳಿಗೆ ಹೋಲಿಸಿದರೆ ಮಂದಗತಿಯಲ್ಲೇ ಮುಂದುವರಿದಿದೆ. ಕಳೆದ ಮೂರು ವರ್ಷಗಳ ಅಂಕಿ–ಅಂಶಗಳನ್ನು ನೋಡುವುದಾದರೆ, 2023–24ರಲ್ಲಿ ಶೇ 19.6, 2024–25ರಲ್ಲಿ ಶೇ 14.6 ಮತ್ತು 2025–26ರಲ್ಲಿ ಶೇ 13.9 ರಷ್ಟಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !