July 30, 2026
Thursday, July 30, 2026
spot_img

ಬೆಳ್ಳಂಬೆಳಗ್ಗೆ ರಿಲೀಸ್‌ ಆಯ್ತು ಬಹುನಿರೀಕ್ಷಿ ʼರಾಮಾಯಣʼದ ಟ್ರೈಲರ್‌, ಯಶ್‌ ಅಬ್ಬರಕ್ಕೆ ಕನ್ನಡಿಗರು ಫಿದಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಾಲಿವುಡ್‌ನ ಬಹುನಿರೀಕ್ಷಿತ ಸಿನಿಮಾ ರಾಮಾಯಣದ ಟ್ರೈಲರ್‌ ಇದೀಗ ರಿಲೀಸ್‌ ಆಗಿದೆ. ಸೂರ್ಯೋದಯಕ್ಕೂ ಮುನ್ನವೇ ಸಿನಿಮಾ ಟ್ರೈಲರ್‌ ರಿಲೀಸ್‌ ಆಗಿದ್ದು, ಸಿನಿಪ್ರಿಯರ ಕಣ್ಣಿಗೆ ಹಬ್ಬದಂತಿದೆ. ಬ್ರಾಹ್ಮಿ ಮಹೂರ್ತದಲ್ಲಿ ಟ್ರೈಲರ್‌ ರಿಲೀಸ್‌ ಮಾಡಿರುವ ಟೀಂ ಜನರ ಕಮೆಂಟ್ಸ್‌ ಕೇಳಿ ಖುಷಿಪಟ್ಟಿದೆ.

ರಾವಣನಾಗಿ ಕನ್ನಡದ ನಟ ರಾಕಿಂಗ್‌ ಸ್ಟಾರ್‌ ಯಶ್‌, ರಾಮನಾಗಿ ರಣಬೀರ್ ಕಪೂರ್ ಅಬ್ಬರಿಸಿದ್ದಾರೆ. ಸಾಯಿ ಪಲ್ಲವಿ ಸೀತೆಯಾಗಿ ಮನಗೆದ್ದಿದ್ದು, ಹಾನ್ಸ್ ಜಿಮ್ಮರ್–ಎ.ಆರ್. ರೆಹಮಾನ್ ಸಂಗೀತ ಮತ್ತು ಭವ್ಯ VFX ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ.

ಇಂದು ಬೆಳಗ್ಗೆ 4.15 ರ ಬ್ರಾಹ್ಮಿ ಮುಹೂರ್ತದಲ್ಲಿ ನಿರ್ಮಾಣ ಸಂಸ್ಥೆ ಟ್ರೈಲರ್ ಬಿಡುಗಡೆ ಮಾಡಿದೆ. ʻThe Ramayana Trailer. This is where the EPIC BEGINSʼ ಎಂಬ ಟ್ಯಾಗ್‌ಲೈನ್‌ನೊಂದಿಗೆ ಬಿಡುಗಡೆಯಾದ ಟ್ರೈಲರ್ ಈಗಾಗಲೇ ಸೋಷಿಯಲ್‌ ಮೀಡಿಯಾದಲ್ಲಿ ಧೂಳೆಬ್ಬಿಸಿದೆ.

ನಾಲ್ಕು ನಿಮಿಷಗಳ ಟ್ರೈಲರ್‌ ಇದಾಗಿದೆ. ಧರ್ಮ ಹಾಗೂ ಅಧರ್ಮದ ನಡುವಿನ ಮಹಾಯುದ್ಧವನ್ನು ದೃಶ್ಯರೂಪಕ್ಕೆ ತರಲಾಗಿದೆ. ಅತ್ಯದ್ಭುತ ವಿಎಫ್‌ಎಕ್ಸ್‌ ಹಾಗೂ ಯುದ್ಧದ ಭವ್ಯ ದೃಶ್ಯಗಳು ಸಿನಿಮಾದ ಆಕರ್ಷಣೆಯಾಗಿದೆ. ರಾಮನಾಗಿ ಸೌಮ್ಯ ಸ್ವಭಾವದವರಂತೆ ರಣಬೀರ್‌ ಕಪೂರ್‌ ಕಾಣಿಸಿದ್ದು, ರಾವಣನಾಗಿ ಯಶ್‌ ಅಬ್ಬರಿಸಿದ್ದಾರೆ.

ಸಿಂಹಾಸನ ತನ್ನದಾಗಿಸಿಕೊಳ್ಳುವ ಅವರ ಭವ್ಯ ಪ್ರವೇಶ ಸಖತ್‌ ಥ್ರಿಲ್‌ ಆಗಿದೆ. ಚಿನ್ನದ ಕವಚ, ಅದ್ಧೂರಿ ವೇಷಭೂಷಣ ಹಾಗೂ ಭಯಾನಕ ಅಭಿವ್ಯಕ್ತಿಗಳೊಂದಿಗೆ ಯಶ್ ವಿವಿಧ ಭಂಗಿಗಳಲ್ಲಿ ಕಾಣಿಸಿಕೊಂಡಿರೋದು ಅಭಿಮಾನಿಗಳನ್ನ ಹುಚ್ಚೆದ್ದು ಕುಣಿಯುವಂತೆ ಮಾಡಿದೆ. ಕನ್ನಡಿಗರಿಗೆ ತಮ್ಮ ನೆಚ್ಚಿನ ನಟನನ್ನು ರಾವಣನನ್ನಾಗಿ ನೋಡಿ ಸಖತ್‌ ಥ್ರಿಲ್‌ ಸಿಕ್ಕಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !