ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಸ್ ಪ್ರಯಾಣಿಕರ ಬಳಿ ಚಿಲ್ಲರೆ ಇಲ್ಲ ಎಂದು ಕಿರುಕುಳ ನೀಡುವಂತಹ ಮಾತುಗಳನ್ನು ಆಡುವುದು, ಬಸ್‌ನಿಂದ ಇಳಿಸುವುದು ಮಾಡಿದರೆ ಅಂತಹ ಕಂಡಕ್ಟರ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ಹೇಳಿದ್ದಾರೆ.
ನೀವೂ ಗೌರವಯುತವಾಗಿ ನಡೆದುಕೊಳ್ಳಿ. ಪ್ರಯಾಣಿಕರೂ ಗೌರವಯುತವಾಗಿ ನಡೆದುಕೊಳ್ಳುತ್ತಾರೆ. ಯಾವುದೇ ನಿಯಮಗಳ ಉಲ್ಲಂಘನೆ ಮಾಡಬೇಡಿ. ಮಾಡಿದರೆ ಕಠಿಣ ಕ್ರಮ ಖಂಡಿತ ಎಂದಿದ್ದಾರೆ.
ಚಿಲ್ಲರೆ ಇಲ್ಲ ಅಂದಮೇಲೆ ಬಸ್ ಹತ್ಬೇಡಿ ಎಂದು ಜನರಿಗೆ ಅವಾಜ್ ಹಾಕಿ ಕೆಳಕ್ಕೆ ಇಳಿಸಲಾಗುತ್ತಿದೆ. ಈ ರೀತಿಯ ದೂರುಗಳು ಕೇಳಿಬರುತ್ತಿದೆ. ಇದೇ ರೀತಿಯ ಅನುಭವ ತಮಗೂ ಈ ತಿಂಗಳ ಆರಂಭದಲ್ಲಿ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುವಾಗ ಆಗಿತ್ತು. ಚಿಲ್ಲರೆ ಇಲ್ಲ ಎಂಬ ಕಾರಣಕ್ಕೆ ಪ್ರಯಾಣಿಕರನ್ನು ಅರ್ಧ ದಾರಿಯಲ್ಲಿ ಬಸ್‌ನಿಂದ ಇಳಿಸುವುದು ಅಮಾನವೀಯ ಕೃತ್ಯವಾಗಿದ್ದು, ಇದು ಪ್ರಯಾಣಿಕರಿಗೆ ಕಿರುಕುಳ ನೀಡಿದಂತೆಯೇ. ಇಂತಹ ಪದ್ಧತಿ ಕೂಡಲೇ ನಿಲ್ಲಬೇಕು. ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸಿದರೆ ಸಂಬಂಧಿಸಿದ ನಿರ್ವಾಹಕರು ಹಾಗೂ ಚಾಲಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.



