ಪ್ರತಿಯೊಬ್ಬರ ಜೀವನದಲ್ಲೂ ಒಂದಲ್ಲ ಒಂದು ಕುಟುಂಬದ ವೈಯಕ್ತಿಕ ವಿಚಾರಗಳಿರುತ್ತವೆ. ಆದರೆ, ಮನೆಯ ಒಳಗಿನ ರಹಸ್ಯಗಳನ್ನು ಪ್ರತಿಯೊಬ್ಬರೊಂದಿಗೂ ಹಂಚಿಕೊಳ್ಳುವುದು ಸೂಕ್ತವಲ್ಲ. ಕೆಲವು ರೀತಿಯ ಸ್ವಭಾವದ ವ್ಯಕ್ತಿಗಳಿಗೆ ನಮ್ಮ ಮನೆ ಗುಟ್ಟು ತಿಳಿಸಿದರೆ, ಅದು ಭವಿಷ್ಯದಲ್ಲಿ ದೊಡ್ಡ ಸವಾಲಾಗಿ ಪರಿಣಮಿಸಬಹುದು.
- ಯಾರಿಗೆ ಇತರರ ಖಾಸಗಿ ವಿಚಾರಗಳನ್ನು ಬೇರೆಯವರ ಮುಂದೆ ಮಾತನಾಡುವ ಅಭ್ಯಾಸವಿರುತ್ತದೆಯೋ, ಅಂತವರ ಬಳಿ ನಿಮ್ಮ ಕುಟುಂಬದ ವಿಷಯಗಳನ್ನು ಎಂದಿಗೂ ಹೇಳಬೇಡಿ.
- ನಿಮ್ಮ ಬೆಳವಣಿಗೆಯನ್ನು ಕಂಡು ಅಸೂಯೆ ಪಡುವ ಜನರಿಗೆ ಮನೆ ವಿಚಾರ ತಿಳಿದರೆ, ಅವರು ಅದನ್ನು ನಿಮ್ಮ ವಿರುದ್ಧವೇ ಬಳಸಬಹುದು.
- ಮುಖಸ್ತುತಿ ಮಾಡುವವರು ನಿಜವಾದ ಹಿತೈಷಿಗಳಲ್ಲ. ಇಂತಹ ವ್ಯಕ್ತಿಗಳು ನಿಮ್ಮ ರಹಸ್ಯಗಳನ್ನು ಸುಲಭವಾಗಿ ಹೊರಹಾಕಿ ದುರುಪಯೋಗಪಡಿಸಿಕೊಳ್ಳುತ್ತಾರೆ.
- ಸಣ್ಣ ವಿಷಯಕ್ಕೂ ತೀವ್ರ ಕೋಪಿಸಿಕೊಳ್ಳುವ ವ್ಯಕ್ತಿಗಳ ಮುಂದೆ ವೈಯಕ್ತಿಕ ವಿಚಾರ ಹಂಚಿಕೊಂಡರೆ, ಜಗಳದ ಸಮಯದಲ್ಲಿ ಅವರು ಅದನ್ನು ಅಸ್ತ್ರವಾಗಿ ಬಳಸುವ ಸಾಧ್ಯತೆ ಹೆಚ್ಚು.
ನಿಮ್ಮ ಮನೆ ವಿಚಾರಗಳನ್ನು ಕೇವಲ ನಂಬಿಕಾರ್ಹ ಹಾಗೂ ನಿಮ್ಮ ಏಳಿಗೆಯನ್ನು ಬಯಸುವ ವ್ಯಕ್ತಿಗಳೊಂದಿಗೆ ಮಾತ್ರ ಹಂಚಿಕೊಳ್ಳಿ. ಅನಗತ್ಯವಾಗಿ ಎಲ್ಲರ ಬಳಿ ಕುಟುಂಬದ ರಹಸ್ಯಗಳನ್ನು ಹೇಳಿಕೊಳ್ಳುವುದರಿಂದ ಸಂಸಾರದ ಶಾಂತಿ ಭಂಗವಾಗುತ್ತದೆ.



