September 16, 2026
Wednesday, September 16, 2026
spot_img

ಮುಂಬೈನಲ್ಲಿ ನಾಲ್ಕು ಅಂತಸ್ತಿತ ಕಟ್ಟಡ ಕುಸಿತ: ಅವಶೇಷಗಳಡಿ ಸಿಕ್ಕಿತು ಒಂಬತ್ತು ಮಂದಿಯ ಮೃತದೇಹ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಳ್ಳಂಬೆಳಗ್ಗೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಿವಂಡಿಯಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ಬಿದ್ದಿದ್ದು, ಮೃತರ ಸಂಖ್ಯೆ ಒಂಬತ್ತಕ್ಕೆ ಏರಿಕೆಯಾಗಿದೆ.

ಇನ್ನೂ ಹಲವು ಮಂದಿ ಅವಶೇಷಗಳ ಅಡಿ ಸಿಲುಕಿಕೊಂಡಿದ್ದು, ಅವರ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ದೊರಕಬೇಕಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ಭಿವಂಡಿ ಅಗ್ನಿಶಾಮಕ ದಳದಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಸ್ಥಳೀಯ ನಿವಾಸಿಗಳ ಪ್ರಕಾರ, ಕಟ್ಟಡದಲ್ಲಿ ಆರು ಜನರು ಮತ್ತು ದುರಸ್ತಿ ಕಾರ್ಯ ನಡೆಸುತ್ತಿದ್ದ ಐದು ಕಾರ್ಮಿಕರು ನಾಪತ್ತೆಯಾಗಿದ್ದಾರೆ.

ಇಲ್ಲಿಯವರೆಗೆ, ನಾವು ಎಂಟು ಮೃತದೇಹಗಳನ್ನು ಅವಶೇಷಗಳಿಂದ ಹೊರತೆಗೆದಿದ್ದೇವೆ. ಇನ್ನೂ ಹೆಚ್ಚಿನ ಮೃತದೇಹಗಳು ಕೆಳಗೆ ಸಿಲುಕಿರುವ ಸಾಧ್ಯತೆಯಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಮೃತದೇಹಗಳನ್ನು ಐಜಿಎಂ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಕಾರ್ಮಿಕರ ಗುರುತನ್ನು ಇನ್ನೂ ಪತ್ತೆ ಮಾಡಲು ಸಾಧ್ಯವಾಗಿಲ್ಲ ಎಂದು ಭಿವಂಡಿ ಅಗ್ನಿಶಾಮಕ ದಳದ ಅಗ್ನಿಶಾಮಕ ಅಧಿಕಾರಿ ನಿತಿನ್ ಚವ್ಹಾಣ್ ತಿಳಿಸಿದ್ದಾರೆ.

ಭಿವಂಡಿಯ ಗಂಗಾರಾಮ್ ವಾಡಾದ ಬಾಲಾಜಿ ನಗರದಲ್ಲಿರುವ ನಾಲ್ಕು ಅಂತಸ್ತಿನ ಕೊಹಿನೂರ್ ಕಟ್ಟಡವನ್ನು ಭಿವಂಡಿ-ನಿಜಾಂಪುರ ಮುನ್ಸಿಪಲ್ ಕಾರ್ಪೊರೇಷನ್ (ಬಿಎನ್‌ಎಂಸಿ) ಈ ಹಿಂದೆ ಅಪಾಯಕಾರಿ ಎಂದು ಘೋಷಿಸಿತ್ತು ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ. ಅಸುರಕ್ಷಿತ ಎಂದು ವರ್ಗೀಕರಿಸಲ್ಪಟ್ಟಿದ್ದರೂ, ಘಟನೆ ಸಂಭವಿಸಿದಾಗ ದುರಸ್ತಿ ಕಾರ್ಯ ನಡೆಯುತ್ತಿತ್ತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !