August 1, 2026
Saturday, August 1, 2026
spot_img

ದಿನಭವಿಷ್ಯ: ಕಷ್ಟದಲ್ಲಿ ಸಹಾಯಕ್ಕೆ ಬಂದವರನ್ನು ಮರೆಯಬೇಡಿ, ಅವರ ಬೇಡಿಕೆಗೂ ಸಮಯ ನೀಡಿ

ಮೇಷ
ಕೌಟುಂಬಿಕ ಹೊಣೆಗಾರಿಕೆ ಹೆಚ್ಚಳ. ವ್ಯವಹಾರದಲ್ಲೂ ಹೆಚ್ಚಿನ ಒತ್ತಡ. ಎರಡನ್ನೂ ಸರಿಯಾಗಿ ನಿಭಾಯಿಸಲು ಸಮರ್ಥರಾಗುವಿರಿ.    
ವೃಷಭ
ನಿಮಗೆ ಕಷ್ಟದಲ್ಲಿ ನೆರವಿಗೆ ಬಂದವರನ್ನು ಮರೆಯಬೇಡಿ.  ಅವರ ಬೇಡಿಕೆಗೂ  ಸ್ಪಂದಿಸಿ. ಆರೋಗ್ಯ ಸಮಸ್ಯೆ ನಿರ್ಲಕ್ಷ್ಯ ಮಾಡಬೇಡಿ.
ಮಿಥುನ
ನಿಮ್ಮೆಡೆಗೆ ಆಸಕ್ತಿ ತೋರುವವರನ್ನು ಕಡೆಗಣಿಸಬೇಡಿ. ಹಣದ ಮುಗ್ಗಟ್ಟಿಗೆ ಇಂದು ಪರಿಹಾರ ದೊರಕಲಿದೆ. ಮಿತ್ರರ ಜತೆ ವಾಗ್ವಾದ.    
ಕಟಕ
ವ್ಯವಹಾರದಲ್ಲಿ ಬದಲಾವಣೆಗೆ ಸಕಾಲ. ಎಲ್ಲವೂ ನಿಮಗೆ ಪೂರಕ ವಾಗಿದೆ. ಕುಟುಂಬಸ್ಥರ ವಿರೋಧ ಶಮನ. ಧನಪ್ರಾಪ್ತಿ, ಅವಕಾಶ.      
ಸಿಂಹ
ಇಂದು ಅಶಾಂತ ಮನಸ್ಥಿತಿ. ಪ್ರತಿಕೂಲ ಪರಿಸ್ಥಿತಿ ಬಂದರೆ ಹದ ತಪ್ಪಿ ವರ್ತಿಸಬೇಡಿ. ಎಲ್ಲರನ್ನೂ ನಿಮ್ಮ ವಿರೋಽಗಳಂತೆ ಕಾಣಬೇಡಿ.
ಕನ್ಯಾ
ಹಳೆಯ ನೋವು ಮತ್ತೆ ಕಾಡಬಹುದು. ಅದಕ್ಕೆ ಶಾಶ್ವತ ಪರಿಹಾರ ಹುಡುಕಿ. ಚಿಂತೆ ಬೇಡ, ನಿಮ್ಮೆಣಿಕೆಯಂತೆ ಎಲ್ಲವೂ ಸಾಗುವುದು.    
ತುಲಾ
ನಿಮ್ಮ ಕುರಿತಂತೆ ಕೆಲವರದು ತೋರಿಕೆಯ ಮೆಚ್ಚುಗೆ. ಅವರಿಗೆ ಮರುಳಾಗಬೇಡಿ. ಸಂಕೀರ್ಣ ವಿಚಾರದಲ್ಲಿ ವಿವೇಕದಿಂದ ವ್ಯವಹರಿಸಿ.    
ವೃಶ್ಚಿಕ
ಬದುಕಿನಲ್ಲಿ ಶಿಸ್ತು ಅಳವಡಿಸಿ. ಬೇಕಾಬಿಟ್ಟಿ ಧೋರಣೆ ಸರಿಯಲ್ಲ.  ನಿಮ್ಮ ದೌರ್ಬಲ್ಯ ಸರಿಪಡಿಸಿ. ಮನೆಯಲ್ಲಿ ಮೃದುವಾಗಿ ವರ್ತಿಸಿ.                    
ಧನು
 ಬಾಕಿ ಉಳಿದ ಕಾರ್ಯ ಪೂರೈಸಲು ಆದ್ಯತೆ ಕೊಡಿ. ವಿಶ್ವಾಸದ ಕೊರತೆ ಕಾಡಲಿದೆ. ಎಲ್ಲವೂ ನಿಮಗೆ ವಿರುದ್ಧವಾಗಿದೆ ಎಂಬ ಭಾವ ಕಾಡಲಿದೆ.
ಮಕರ
ವೇಳಾಪಟ್ಟಿ ಹಾಕಿಕೊಂಡು ವ್ಯವಹರಿಸಿ. ಕಾರ್ಯವಿಳಂಬ ತಪ್ಪಿಸಿರಿ. ಯಾರದೋ ಮರ್ಜಿಗೆ ತಕ್ಕಂತೆ ಬಾಗಬೇಡಿ, ಸ್ವಂತಿಕೆಯಿರಲಿ.  
ಕುಂಭ
ಹೊಸತನಕ್ಕೆ ತೆರೆದುಕೊಳ್ಳಿ. ಕೆಲವು ವಿಷಯಗಳಲ್ಲಿ ತೊಡಗಿಕೊಳ್ಳಿ.  ನನಗಿದು ಬೇಡ ಎಂಬ ನಿರಾಸಕ್ತಿ ತ್ಯಜಿಸಿ. ಆರ್ಥಿಕ ಕೊರತೆ ನೀಗಲಿದೆ.
ಮೀನ
ನೆಮ್ಮದಿ ಕೆಡಿಸುವ ಪ್ರಸಂಗ ಉಂಟಾದೀತು. ಅಸಹನೆ ಉಂಟಾದೀತು. ದೃಢ ಮನಸ್ಸಿನಿಂದ ಅದನ್ನು ನಿಭಾಯಿಸಿಕೊಳ್ಳಿ. ಕುಟುಂಬಸ್ಥರ ಸಹಕಾರ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !