ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರಿನ ಐತಿಹಾಸಿಕ ರಾಮಕೃಷ್ಣ ಆಶ್ರಮದ ವಿದ್ಯಾಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ರಾಜ್ಯದ ಪ್ರಗತಿಗೆ ಕೇಂದ್ರ ಸರ್ಕಾರದ ಪೂರ್ಣ ಬೆಂಬಲ ಕೋರಿದ್ದಾರೆ. “ಕರ್ನಾಟಕವನ್ನು ರಕ್ಷಿಸಿ ಹಾಗೂ ಬೆಳೆಸಲು ನಮಗೆ ನಿಮ್ಮ ಸಹಕಾರ ಅಗತ್ಯ” ಎಂದು ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಕೋರಿದರು.
ಯುವಶಕ್ತಿ ಮತ್ತು ವಿವೇಕಾನಂದರ ಚಿಂತನೆ
ಸ್ವಾಮಿ ವಿವೇಕಾನಂದರ ವಿಚಾರಗಳನ್ನು ಆಧರಿಸಿ ನವಯುಗದ ಮಾದರಿಯಲ್ಲಿ ಸರ್ಕಾರ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದರು. ಗ್ರಾಮ ಪಂಚಾಯಿತಿ ಮತ್ತು ನಗರ ಪ್ರದೇಶಗಳಲ್ಲಿ ಯುವ ಪಡೆಗಳನ್ನು ಸಂಘಟಿಸಿ, ವಿವೇಕಾನಂದರ ಕನಸುಗಳನ್ನು ನನಸು ಮಾಡಲು ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದರು.
ಒಟ್ಟಾಗಿ ಬೆಳೆಯಲಿ ಭಾರತ-ಕರ್ನಾಟಕ
ಕರ್ನಾಟಕವು ಸಂಸ್ಕೃತಿ ಮತ್ತು ಸಂಕಲ್ಪದ ಭೂಮಿಯಾಗಿದ್ದು, ಇಡೀ ದೇಶವೇ ರಾಜ್ಯದತ್ತ ನೋಡುತ್ತಿದೆ. ಕರ್ನಾಟಕ ಅಭಿವೃದ್ಧಿಯಾದರೆ ಮಾತ್ರ ಭಾರತದ ನೈಜ ಪ್ರಗತಿ ಸಾಧ್ಯ. ಮೈಸೂರಿನಿಂದ ಚಿಕಾಗೋವರೆಗೆ ಹೆಸರು ಮಾಡಿದ ವಿವೇಕಾನಂದರ ನೆನಪಿನ ಈ ಆಶ್ರಮವು ಕೇವಲ ರಾಜ್ಯದ್ದಷ್ಟೇ ಅಲ್ಲ, ಇಡೀ ದೇಶದ ಮಹತ್ವದ ಆಸ್ತಿಯಾಗಿದೆ ಎಂದು ಬಣ್ಣಿಸಿದರು.



