ಪ್ರತಿಯೊಬ್ಬರೂ ದಿನದ ಕೊನೆಯಲ್ಲಿ ನೆಮ್ಮದಿ ಅರಸಿ ಬರುವುದು ತಮ್ಮ ಸ್ವಂತ ಮನೆಗೆ. ಆದರೆ, ಇತ್ತೀಚಿನ ದಿನಗಳಲ್ಲಿ ಅನೇಕ ಕುಟುಂಬಗಳಲ್ಲಿ ಸಣ್ಣಪುಟ್ಟ ವಿಷಯಗಳಿಗೂ ಜಗಳ ಮತ್ತು ಅಶಾಂತಿ ಸೃಷ್ಟಿಯಾಗುತ್ತಿರುತ್ತದೆ. ಇದಕ್ಕೆ ಮುಖ್ಯ ಕಾರಣಗಳು ಇಲ್ಲಿವೆ.
ಪರಸ್ಪರ ಸಂವಹನದ ಕೊರತೆ
ಕುಟುಂಬದ ಸದಸ್ಯರ ನಡುವೆ ಪ್ರೀತಿಯ ಮಾತುಕತೆ ಕಡಿಮೆಯಾದಾಗ ಭಿನ್ನಾಭಿಪ್ರಾಯಗಳು ಹೆಚ್ಚಾಗುತ್ತವೆ. ದಿನವೂ ಸ್ವಲ್ಪ ಸಮಯ ಒಟ್ಟಿಗೆ ಕುಳಿತು ಮಾತನಾಡುವುದರಿಂದ ಅರ್ಧಕ್ಕಿಂದ ಹೆಚ್ಚು ಮನಸ್ತಾಪಗಳು ದೂರವಾಗುತ್ತವೆ.
ಮನೆಯ ವಾಸ್ತು ದೋಷಗಳು
ವಾಸ್ತು ಶಾಸ್ತ್ರದ ಪ್ರಕಾರ ಈಶಾನ್ಯ ದಿಕ್ಕಿನಲ್ಲಿ ಅತಿಯಾದ ಕಸ ಅಥವಾ ಭಾರವಾದ ವಸ್ತುಗಳನ್ನು ಇಡುವುದರಿಂದ ಕುಟುಂಬದಲ್ಲಿ ಮಾನಸಿಕ ಒತ್ತಡ ಉಂಟಾಗುತ್ತದೆ. ಪ್ರಮುಖವಾಗಿ ಉತ್ತರ ಮತ್ತು ಈಶಾನ್ಯ ಭಾಗಗಳನ್ನು ಸದಾ ಶುಚಿಯಾಗಿಡುವುದು ಒಳಿತು.
ಆರ್ಥಿಕ ಅಸಮತೋಲನ
ಆದಾಯಕ್ಕಿಂತ ಹೆಚ್ಚಿನ ಖರ್ಚು ಮಾಡುವುದು ಮತ್ತು ಸಾಲದ ಬೊರೆ ಕುಟುಂಬದ ಸದಸ್ಯರ ನಡುವೆ ಉದ್ವಿಗ್ನತೆಯನ್ನು ಹೆಚ್ಚಿಸುತ್ತದೆ. ಸೂಕ್ತ ಬಜೆಟ್ ಯೋಜನೆ ಇಲ್ಲದಿರುವುದು ಮನೆ ಮನಸ್ಸಿನ ಶಾಂತಿ ಕೆಡಿಸಲು ಪ್ರಮುಖ ಕಾರಣ.
ಮನೆಯಲ್ಲಿನ ನಕಾರಾತ್ಮಕ ಶಕ್ತಿ
ಸದಾ ಕತ್ತಲಾಗಿರುವ, ಗಾಳಿ-ಬೆಳಕು ಸರಿಯಾಗಿ ಆಡದ ಮನೆಗಳಲ್ಲಿ ನಕಾರಾತ್ಮಕ ಶಕ್ತಿ ನೆಲೆಸುತ್ತದೆ. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಮನೆಯಲ್ಲಿ ದೀಪ ಹಚ್ಚಿ, ಧೂಪ ಹಾಕುವುದರಿಂದ ಧನಾತ್ಮಕ ಶಕ್ತಿ ಹೆಚ್ಚುತ್ತದೆ.



