September 27, 2026
Sunday, September 27, 2026
spot_img

ಚಿಂತೆ ಬಿಡಿ, ತಿಂಡಿ ಮಾಡಿ‌ 46 | ಜಿಮ್‌ಗೆ ಹೋಗುವವರಿಗಾಗಿ ಈ ಹೆಲ್ದೀ ಬ್ರೇಕ್‌ ಫಾಸ್ಟ್

ಬ್ಯಾಚುಲರ್ಸ್‌ಗೆ ಮತ್ತು ಜಿಮ್‌ ಹೋಗುವವರಿಗೆ ಅತ್ಯಂತ ಸುಲಭವಾಗಿ ಮತ್ತು ಕೇವಲ 5 ನಿಮಿಷಗಳಲ್ಲಿ ಮಾಡಬಹುದಾದ ಕ್ವಿಕ್ ಎಗ್ ದೋಸೆ ಇಲ್ಲಿದೆ. ಇದಕ್ಕೆ ಮೊದಲೇ ರುಬ್ಬಿಟ್ಟ ದೋಸೆ ಹಿಟ್ಟು ಇದ್ದರೆ ಸಾಕು, ತರಕಾರಿ ಹೆಚ್ಚುವ ಗೋಜೇ ಇರುವುದಿಲ್ಲ.

ಬೇಕಾಗುವ ಸಾಮಗ್ರಿಗಳು:

ದೋಸೆ ಹಿಟ್ಟು

ಮೊಟ್ಟೆ

ಮೆಣಸಿನಕಾಯಿ ಪುಡಿ

ಕಾಳುಮೆಣಸಿನ ಪುಡಿ

ಉಪ್ಪು

ಎಣ್ಣೆ ಅಥವಾ ಬೆಣ್ಣೆ

 ಮಾಡುವ ವಿಧಾನ

ಮೊದಲು ದೋಸೆ ತವಾವನ್ನು ಬಿಸಿ ಮಾಡಿ. ತವಾ ಕಾದ ನಂತರ ಒಂದು ದೊಡ್ಡ ಚಮಚ ದೋಸೆ ಹಿಟ್ಟನ್ನು ಹಾಕಿ ತೆಳ್ಳಗೆ ವೃತ್ತಾಕಾರವಾಗಿ ಹರಡಿ. ದೋಸೆ ಮೇಲ್ಭಾಗ ಸ್ವಲ್ಪ ಒಣಗಲು ಆರಂಭಿಸಿದ ತಕ್ಷಣ, ಒಂದು ಮೊಟ್ಟೆಯನ್ನು ನೇರವಾಗಿ ದೋಸೆಯ ಮಧ್ಯಭಾಗಕ್ಕೆ ಒಡೆದು ಹಾಕಿ. ಚಮಚದ ಸಹಾಯದಿಂದ ಮೊಟ್ಟೆಯ ಹಳದಿ ಮತ್ತು ಬಿಳಿ ಭಾಗವನ್ನು ದೋಸೆಯ ಎಲ್ಲಾ ಕಡೆಗೂ ಸಮನಾಗಿ ಹರಡಿ. ಈಗ ಮೊಟ್ಟೆಯ ಮೇಲ್ಭಾಗಕ್ಕೆ ಚಿಟಿಕೆ ಉಪ್ಪು, ಖಾರದ ಪುಡಿ ಮತ್ತು ಕಾಳುಮೆಣಸಿನ ಪುಡಿಯನ್ನು ಉದುರಿಸಿ. ದೋಸೆಯ ಸುತ್ತಲೂ ಮತ್ತು ಮಧ್ಯದಲ್ಲಿ ಒಂದು ಚಮಚ ಎಣ್ಣೆ ಅಥವಾ ಬೆಣ್ಣೆ ಹಾಕಿ. ಮೀಡಿಯಂ ಉರಿಯಲ್ಲಿ 1 ನಿಮಿಷ ಬೇಯಲು ಬಿಡಿ. ಮೊಟ್ಟೆ ಸ್ವಲ್ಪ ಬೆಂದ ನಂತರ, ದೋಸೆಯನ್ನು ಉಲ್ಟಾ ಮಾಡಿ.ಮೊಟ್ಟೆ ಇರುವ ಭಾಗ ತವಾಕ್ಕೆ ತಾಗಿ 30 ಸೆಕೆಂಡುಗಳು ಚೆನ್ನಾಗಿ ಬೇಯಲಿ. ನಂತರ ಮತ್ತೆ ಉಲ್ಟಾ ಮಾಡಿ ತಟ್ಟೆಗೆ ತೆಗೆದರೆ ಬಿಸಿಬಿಸಿಯಾದ ಮತ್ತು ಕ್ರಿಸ್ಪಿಯಾದ ಎಗ್ ದೋಸೆ ಸಿದ್ಧ.

Must Read