August 2, 2026
Sunday, August 2, 2026
spot_img

ಸಮುದ್ರದ ನಡುವೆ ಹೊತ್ತಿ ಉರಿದ ಬೋಟ್: ಐವರು ಜಲಸಮಾಧಿ, 41ಕ್ಕೂ ಹೆಚ್ಚು ಮಂದಿ ನಾಪತ್ತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಏಷ್ಯಾದ ದ್ವೀಪಸಮೂಹ ರಾಷ್ಟ್ರ ಇಂಡೋನೇಷ್ಯಾದ ಮಧುರಾ ಕರಾವಳಿ ಭಾಗದಲ್ಲಿ ಸಂಚರಿಸುತ್ತಿದ್ದ ಬೋಟ್‌ ಒಂದರಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ಈ ದುರಂತದಲ್ಲಿ ಕನಿಷ್ಠ ಐವರು ಜೀವ ಕಳೆದುಕೊಂಡಿದ್ದು, 41ಕ್ಕೂ ಹೆಚ್ಚು ಜನರು ಕಡಲಿನಲ್ಲಿ ನಾಪತ್ತೆಯಾಗಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ಮತ್ತು ರಕ್ಷಣಾ ಪಡೆ ದೃಢಪಡಿಸಿದೆ.

ಸಮುದ್ರಕ್ಕೆ ಜಿಗಿದ ಪ್ರಯಾಣಿಕರು: ಜಂಟಿ ರಕ್ಷಣಾ ಕಾರ್ಯಾಚರಣೆ

ಹಡಗಿನಿಂದ ದಟ್ಟವಾದ ಹೊಗೆ ಹಾಗೂ ಬೆಂಕಿಯ ಜ್ವಾಲೆ ವ್ಯಾಪಿಸುತ್ತಿದ್ದಂತೆ, ಭೀತಿಗೆಳಗಾದ ಪ್ರಯಾಣಿಕರು ಜೀವಳಿಸಿಕೊಳ್ಳಲು ನೀರಿಗೆ ಧುಮುಕಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ನೌಕಾಪಡೆ ತಕ್ಷಣ ಕಾರ್ಯಪ್ರವೃತ್ತರಾಗಿದ್ದು, ಮುಳುಗುತ್ತಿದ್ದ ಹಲವರನ್ನು ರಕ್ಷಿಸಿದೆ. ಆದರೆ, ದುರದೃಷ್ಟವಶಾತ್ ಐದು ಜನರ ಮೃತದೇಹಗಳು ನೀರಿನಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆಯಾಗಿವೆ. ನಾಪತ್ತೆಯಾದವರಿಗಾಗಿ ಹೈ-ಸ್ಪೀಡ್ ದೋಣಿಗಳು ಹಾಗೂ ಹೆಲಿಕಾಪ್ಟರ್ ಮೂಲಕ ಶೋಧ ಕಾರ್ಯ ತೀವ್ರಗೊಳಿಸಲಾಗಿದೆ.

ನಿಯಮ ಮೀರಿದ ಪ್ರಯಾಣಿಕರು ಮತ್ತು ತಾಂತ್ರಿಕ ದೋಷ?

ಇಂಜಿನ್ ವಿಭಾಗದಲ್ಲಿ ಸಂಭವಿಸಿದ ಶಾರ್ಟ್ ಸರ್ಕ್ಯೂಟ್ ಈ ದುರಂತಕ್ಕೆ ಮೂಲ ಕಾರಣವಿರಬಹುದು ಎಂದು ಶಂಕಿಸಲಾಗಿದೆ. ಜತೆಗೆ, ಹಡಗಿನಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ತುಂಬಿಸಲಾಗಿತ್ತು ಎಂಬ ಆರೋಪ ಕೇಳಿಬಂದಿದೆ. ಸಾಲು ಸಾಲು ದ್ವೀಪಗಳನ್ನು ಹೊಂದಿರುವ ಇಂಡೋನೇಷ್ಯಾದಲ್ಲಿ ಹಳೆಯ ಬೋಟ್‌ಗಳ ಬಳಕೆ ಹಾಗೂ ಸುರಕ್ಷತಾ ನಿಯಮಗಳ ಉಲ್ಲಂಘನೆಯಿಂದಾಗಿ ಇಂತಹ ಕಡಲ ಅಪಘಾತಗಳು ಪದೇ ಪದೇ ಮರುಕಳಿಸುತ್ತಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !