August 2, 2026
Sunday, August 2, 2026
spot_img

ಪ್ರಧಾನಿ ವಿರುದ್ಧ ಅವಾಚ್ಯ ಪದ ಬಳಸಿದ ಆರೋಪ : ‘ತಪ್ಪು ಅರಿವಾಗಿದೆ, ಮಗಳನ್ನು ಕ್ಷಮಿಸಿದ್ದಕ್ಕೆ ಧನ್ಯವಾದ’ ಎಂದ ಬಾಲಕಿಯ ತಾಯಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿದ್ಯಾರ್ಥಿಗಳ ಪ್ರತಿಭಟನೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಾಚ್ಯ ಪದಗಳನ್ನು ಬಳಸಿದ ಆರೋಪ ಎದುರಿಸುತ್ತಿರುವ ಅಪ್ರಾಪ್ತ ಬಾಲಕಿಯ ತಾಯಿ ಇದೀಗ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ.

ಮಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ದಾಖಲಾದ ಪ್ರಕರಣವನ್ನು ಕೈಬಿಡುವಂತೆ ಅವರು ಪ್ರಧಾನಿ ಮೋದಿಯವರಿಗೆ ಮನವಿ ಮಾಡಿದ್ದಾರೆ.

ತಪ್ಪು ನಡೆದಿರುವುದನ್ನು ಒಪ್ಪಿಕೊಂಡಿರುವ ತಾಯಿ, ಈ ಘಟನೆಗೆ ಕುಟುಂಬ ನಾಚಿಕೆಪಡುತ್ತಿದೆ ಎಂದು ಹೇಳಿದ್ದಾರೆ. ಎಫ್‌ಐಆರ್‌ನಲ್ಲಿ ಹೆಸರು ಮತ್ತು ವಯಸ್ಸಿನಲ್ಲೂ ತಪ್ಪುಗಳಿದ್ದು, ಮಗಳಿಗೆ ಹೊಸ ಜೀವನ ಆರಂಭಿಸಲು ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ.

ಸಾಮಾಜಿಕ ಜಾಲತಾಣಗಳ ಮೇಲೂ ಕಳವಳ

18 ವರ್ಷದೊಳಗಿನ ಮಕ್ಕಳಿಗೆ Instagram ಹಾಗೂ Facebook ಬಳಕೆಯನ್ನು ನಿರ್ಬಂಧಿಸಬೇಕು ಎಂದು ತಾಯಿ ಆಗ್ರಹಿಸಿದ್ದಾರೆ. ಮಕ್ಕಳು ಓದಿನತ್ತ ಗಮನಹರಿಸಬೇಕು, ಪ್ರತಿಭಟನೆಗಳಂತಹ ಸಂದರ್ಭಗಳಲ್ಲಿ ಇತರರ ಪ್ರಭಾವಕ್ಕೆ ಒಳಗಾಗಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ:

ಕ್ಷಮೆಯ ಸಂದೇಶ ನೀಡಿದ್ದ ಪ್ರಧಾನಿ ಮೋದಿ

ಈ ಪ್ರಕರಣದ ಬಳಿಕ ಬಾಲಕಿಯೂ ತನ್ನ ತಪ್ಪನ್ನು ಒಪ್ಪಿಕೊಂಡು ದೇಶದ ಜನರು ಹಾಗೂ ಪ್ರಧಾನಿ ಮೋದಿಯವರಲ್ಲಿ ಕ್ಷಮೆಯಾಚಿಸಿದ್ದಳು. ಇದೇ ವೇಳೆ ಪ್ರಧಾನಿ ಮೋದಿ ಕೂಡ ಅವಾಚ್ಯ ಪದಗಳಿಂದ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ ಎಂದು ಹೇಳಿ, ದಾರಿ ತಪ್ಪಿದ ಮಕ್ಕಳಿಗೆ ಶಿಕ್ಷೆಗಿಂತ ಸರಿಯಾದ ಮಾರ್ಗದರ್ಶನ ನೀಡುವುದು ಮುಖ್ಯ ಎಂದು ಸಂದೇಶ ನೀಡಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !