September 27, 2026
Sunday, September 27, 2026
spot_img

ಸ್ನಾಕ್ಸ್‌ ಇಲ್ಲದೆ ಸಂಜೆ ಕಳೆಯೋದು ಹೇಗೆ? ಇಂದಿನ ಚಹಾಗೆ ಜೊತೆಯಾಗ್ಲಿ ನರ್ಗೀಸ್‌ ಮಂಡಕ್ಕಿ

ದಾವಣಗೆರೆಯಲ್ಲಿ ತಿನ್ನೋಕೆ ಸಿಗುವ ಎಲ್ಲ ಸ್ನಾಕ್ಸ್‌ ಕೂಡ ಸೂಪರ್‌ ಆಗಿರುತ್ತದೆ. ಆದರೆ ದಾವಣಗೆರೆಯನ್ನು ಬಿಟ್ಟು ಇಡೀ ರಾಜ್ಯಾದ್ಯಂತ ಹೆಚ್ಚು ಫೇಮಸ್‌ ಆಗಿರೋದು ನರ್ಗೀಸ್‌ ಮಂಡಕ್ಕಿ ಹಾಗೂ ಬೆಣ್ಣೆ ದೋಸೆ.

ನೀವು ಎಷ್ಟೋ ಬಗೆಯ ಮಂಡಕ್ಕಿಯನ್ನು ತಿಂದಿರಬಹುದು, ಆದರೆ ಈ ನರ್ಗೀಸ್‌ ಮಂಡಕ್ಕಿಯನ್ನು ಒಮ್ಮೆ ಟ್ರೈ ಮಾಡಿದ್ರೆ ಮತ್ತೆ ಇದೇ ಬೇಕು ಅಂತೀರಿ. ಜನರ ಫೇವರೆಟ್‌ ನರ್ಗೀಸ್‌ ಮಂಡಕ್ಕಿ ಹೇಗೆ ಮಾಡೋದು ಗೊತ್ತಾ? ಒಂದು ಸಿಂಪಲ್‌ ಆದರೆ ಟೇಸ್ಟಿ ರೆಸಿಪಿ ಇಲ್ಲಿದೆ ನೋಡಿ..

ಇದಕ್ಕೆ ಏನೆಲ್ಲಾ ಬೇಕಾಗತ್ತೆ?
ಮಂಡಕ್ಕಿ
ಎಣ್ಣೆ
ಸಾಸಿವೆ
ಜೀರಿಗೆ
ಕಡ್ಲೆ
ಶೇಂಗಾ
ಹಸಿಮೆಣಸಿನಕಾಯಿ
ಸಕ್ಕರೆ
ಕಡ್ಲೆ
ಬೆಳ್ಳುಳ್ಳಿ
ಅರಿಶಿಣ ಪುಡಿ
ಉಪ್ಪು

ಮಾಡುವ ವಿಧಾನ

ಈ ರೆಸಿಪಿಗಾಗಿ ದಾವಣಗೆರೆ, ಶಿವಮೊಗ್ಗ ಕಡೆಯ ಮಂಡಕ್ಕಿಯನ್ನು ತೆಗೆದುಕೊಳ್ಳೋದು ಉತ್ತಮ. ಮೊದಲು ಬಾಣಲೆಗೆ ಎಣ್ಣೆ, ಸಾಸಿವೆ, ಜೀರಿಗೆ, ಕರಿಬೇವು, ಹಸಿಮೆಣಸನ್ನು ಹಾಕಿ ಚೆನ್ನಾಗಿ ಬಾಡಿಸಿ, ಆನಂತರ ಜಜ್ಜಿದ ಬೆಳ್ಳುಳ್ಳಿ, ಶೇಂಗಾವನ್ನು ಹಾಕಿ ಫ್ರೈ ಮಾಡ್ಕೊಳಿ. ಇದು ಬ್ರೌನ್‌ ಆಗಬೇಕು.

ಆನಂತರ ಇದಕ್ಕೆ ಉಪ್ಪು ಹಾಕಿ, ಜೊತೆಗೆ ಮಂಡಕ್ಕಿ ಹಾಕಿ ಚೆನ್ನಾಗಿ ಮಿಕ್ಸ್‌ಮಾಡಿ. ಮಿಕ್ಸಿಗೆ ಹುರಿಗಡಲೆ ಹಾಕಿ ಜೊತೆಗೆ ಒಂದು ಸ್ಪೂನ್‌ ಸಕ್ಕರೆ ಹಾಕಿ ಪುಡಿಮಾಡಿಕೊಳ್ಳಿ.

ಈ ಮಿಶ್ರಣವನ್ನು ಮಂಡಕ್ಕಿಗೆ ಹಾಕಿ ಒಂದೆರಡು ನಿಮಿಷ ಬಾಡಿಸಿದರೆ ಮಂಡಕ್ಕಿ ತಯಾರಾಗುತ್ತದೆ. ಇದರ ಜೊತೆ ಮಿಕ್ಸ್ಚರ್‌ ಹಾಗೂ ಹಸಿ ಈರುಳ್ಳಿ ಹಾಗೂ ಕೊತ್ತಂಬರಿ ಸೊಪ್ಪನ್ನು ಹಾಕಿಕೊಂಡು ತಿಂದ್ರೆ ರುಚಿ ಅದ್ಭುತವಾಗಿ ಇರುತ್ತದೆ.

ಇದೆಲ್ಲದರ ಜೊತೆ ಒಂದು ದೊಡ್ಡ ಕಪ್‌ ಚಹಾ ಮರೀಬೇಡಿ!

ಮಂಡಕ್ಕಿ ಉಳಿದರೆ, ಮಸಾಲೆ ಮಂಡಕ್ಕಿ, ಮಂಡಕ್ಕಿ ಉಸಲಿ, ಮೈಸೂರು ಮಸಾಲೆ ಮಂಡಕ್ಕಿ, ಮಂಡಕ್ಕಿ ಒಗ್ಗರಣೆ ಇನ್ನಷ್ಟು ತಿಂಡಿಗಳನ್ನು ಮಾಡಿ ತಿನ್ನಬಹುದು.

Must Read