September 27, 2026
Sunday, September 27, 2026
spot_img

ಚಿಂತೆ ಬಿಡಿ, ತಿಂಡಿ ಮಾಡಿ‌ 48 | ಎಲ್ಲಾ ತರಹದ ತಿಂಡಿಗಳೂ ಬೋರ್‌ ಆಗಿದ್ರೆ ಈ ಸಿಹಿ ಅವಲಕ್ಕಿ ಟ್ರೈ ಮಾಡಿ

ದಕ್ಷಿಣ ಭಾರತದಲ್ಲಿ ನೂರಾರು ಬಗೆಯ ತಿಂಡಿಗಳಿವೆ, ಬರೀ ತಿಂಡಿಗಳದ್ದೇ ಪುಸ್ತಕಗಳು ಕೂಡ ಲಭ್ಯವಿದೆ. ಈ ತಿಂಡಿಗಳಲ್ಲಿ ಬಹುಪ್ರಸಿದ್ಧವಾದ್ದು ಸಿಹಿ ಅವಲಕ್ಕಿ. ಯಾವುದೇ ಪೂಜೆ, ವಾರದ ದಿನ ಇದನ್ನು ಪ್ರಸಾದವಾಗಿ ಇಡುತ್ತಾರೆ. ಮಕ್ಕಳಿಗಂತೂ ಈ ಸಿಹಿ ಅವಲಕ್ಕಿ ತುಂಬಾನೇ ಫೇವರೆಟ್‌. ಇದನ್ನು ಮಾಡೋಕೆ ಕಡಿಮೆ ಸಾಮಾಗ್ರಿಗಳು ಸಾಕು. ಆದರೆ ಮಾಡೋಕೆ ಸ್ವಲ್ಪ ತಾಳ್ಮೆ ಬೇಕು. ಹೇಗೆ ಮಾಡೋದು ಈ ರೆಸಿಪಿ ನೋಡಿ..

ಸಾಮಾಗ್ರಿಗಳು
ತೆಳು/ಪೇಪರ್‌ ಅವಲಕ್ಕಿ
ಬೆಲ್ಲ
ಏಲಕ್ಕಿ
ಕಾಯಿತುರಿ

ಮಾಡುವ ವಿಧಾನ
ಮೊದಲು ನಿಮ್ಮ ತೆಳು ಅವಲಕ್ಕಿಯನ್ನು ಒಂದು ದೊಡ್ಡ ಬೌಲ್‌ಗೆ ಹಾಕಿಕೊಳ್ಳಿ. ಕೈಯಲ್ಲಿ ಕಲಸಲು ಜಾಗ ಇರುವಷ್ಟು ದೊಡ್ಡ ಬಟ್ಟಲು.
ಆನಂತರ ಅದೇ ಬೌಲ್‌ಗೆ ಒಂದು ತೆಂಗಿನಕಾಯಿಯ ತುರಿಯನ್ನು ಹಾಕಿ
ಮೇಲೆ ಬೆಲ್ಲದ ಪೀಸ್‌ಗಳನ್ನು ಹಾಕಿ, ಕೈಯಲ್ಲಿ ಚೆನ್ನಾಗಿ ಕಲಸಿ
ಆನಂತರ ಸ್ವಲ್ಪ ಏಲಕ್ಕಿ ಪುಡಿ ಬೇಕಿದ್ದಲ್ಲಿ ಹಾಕಿ ಇನ್ನೊಮ್ಮೆ ಕೈಯಾಡಿಸಿ

ಇಷ್ಟು ಮಾಡಿ ಒಂದೆರಡು ನಿಮಿಷ ಬಿಟ್ಟರೆ ಆಯ್ತು, ಆನಂತರ ರುಚಿ ರುಚಿಯಾದ ಅವಲಕ್ಕಿ ರೆಡಿ. ಮಕ್ಕಳು ಅಷ್ಟೇ ಅಲ್ಲ, ದೊಡ್ಡವರು ಕೂಡ ಇದನ್ನು ಇಷ್ಟಪಟ್ಟು ತಿಂತಾರೆ

Must Read