August 4, 2026
Tuesday, August 4, 2026
spot_img

ಎಷ್ಟೇ ರಾಜಕೀಯ ಭಿನ್ನಾಭಿಪ್ರಾಯ ಇರಲಿ, ತ್ರಿಷಾ ಬಗ್ಗೆ ಮಾತನಾಡಿದ್ದು ತಪ್ಪು: ಖುಷ್ಬು ಸುಂದರ್‌ ಗರಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ತಮಿಳುನಾಡಿನ ಮಾಜಿ ಡಿಸಿಎಂ ಮತ್ತು ನಟ ಉದಯನಿಧಿ ಸ್ಟಾಲಿನ್‌ ಸಾರ್ವಜನಿಕ ಭಾಷಣದಲ್ಲಿ ನಟಿ ತ್ರಿಶಾ ಬಗ್ಗೆ ನೀಡಿದ ಹೇಳಿಕೆಯಿಂದಾಗಿ ಅರೆಸ್ಟ್‌ ಆಗಿದ್ದು, ತ್ರಿಷಾ ಬೆನ್ನಿಗೆ ನಟಿ, ರಾಜಕಾರಣಿ ಖುಷ್ಬು ಸುಂದರ್‌ ನಿಂತಿದ್ದಾರೆ.

ಸಿಎಂ ಜೋಸೆಫ್‌ ವಿಜಯ್‌ ಹಾಗೂ ನಟಿ ತ್ರಿಷಾ ಕೃಷ್ಣನ್‌ ಬಗ್ಗೆ ಡಬಲ್‌ ಮೀನಿಂಗ್‌ ಜೋಕ್‌ ಮಾಡಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿರುವ ಸ್ಟಾಲಿನ್‌ ಬಗ್ಗೆ ಖುಷ್ಬು ಸುಂದರ್‌ ಟ್ವೀಟ್‌ ಮಾಡಿದ್ದಾರೆ.

ಟ್ವೀಟ್‌ನಲ್ಲೇನಿದೆ?

ಉದಯನಿಧಿ ಸ್ಟಾಲಿನ್‌ ಅವರ ಭಾಷಣದ ವಿಡಿಯೋ ನೋಡಿದೆ. ಅತ್ಯಂತ ಕೆಟ್ಟ, ಅವಹೇಳನಾಕಾರಿಯಾದ, ಅಸಹ್ಯಕರವಾದ ಭಾಷಣ ಅದಾಗಿತ್ತು. ಒಂದು ದಿನ ಇಡೀ ರಾಜಕೀಯ ತಂಡವನ್ನು ಆಳಬೇಕು ಎಂದುಕೊಂಡಿರುವವ ಮನಸ್ಥಿತಿ ಹೀಗಿದ್ದರೆ ದೇವರೇ ನಮ್ಮನ್ನು ಕಾಪಾಡಬೇಕು. ಹೆಣ್ಣುಮಕ್ಕಳನ್ನು ವಸ್ತುವಿನಂತೆ ಕಾಣೋದು ಇಂದೇ ಕೊನೆಯಾಗಬೇಕು. ಹೆಣ್ಣನ್ನು ಬೈಯುತ್ತಾ, ದೌರ್ಜನ್ಯ ಎಸಗುತ್ತಾ, ಅವಮಾನ ಮಾಡುವುದು ಅಸಹ್ಯಕರ ಅನಿಸೋದಿಲ್ವಾ? ಇಂಥ ಚೀಪ್‌ ಮಾತುಗಳನ್ನು ಭಾಷಣದಲ್ಲಿ ಹೇಳಿದಾಗ ಜನರಿಗೂ ಮುಜುಗರವಾಗಿಲ್ಲ. ಎದ್ದು ನಿಂತು ಚಪ್ಪಾಳೆ ಹೊಡೆದು, ಶಿಳ್ಳೆ ಹಾಕಿದ್ದೀರಿ. ಇದು ಸರಿಯಾ?

ಸಾರ್ವಜನಿಕ ಭಾಷಣದಲ್ಲಿ ಈ ರೀತಿ ಹೆಣ್ಣುಮಕ್ಕಳ ಬಗ್ಗೆ ಕೆಟ್ಟ ಪದಗಳಲ್ಲಿ ಮಾತನಾಡೋದು, ಅದನ್ನು ಜನ ಎಂಜಾಯ್‌ ಮಾಡೋದು ನಾರ್ಮಲ್‌ ಆಗಿಬಿಟ್ಟಿದೆಯಾ? ರಾಜಕೀಯ ಭಿನ್ನಾಭಿಪ್ರಾಯಗಳು ಕಾಮನ್‌. ಆದರೆ ಸಾರ್ವಜನಿಕ ಭಾಷಣಕ್ಕೆ ಮಿತಿ ಇರಬೇಕು. ನಿಮ್ಮಿಷ್ಟಕ್ಕೆ ಬಂದ ಹಾಗೆ ಹೆಣ್ಣನ್ನು ಗೊಂಬೆಯಂತೆ ಟ್ರೀಟ್‌ ಮಾಡೋದನ್ನು ನಿಲ್ಲಿಸಿ. ಸಭ್ಯತೆ ಇದ್ದರೆ ಅಷ್ಟೇ ಜನದ ಮುಂದೆ ಸಾರ್ವಜನಿಕವಾಗಿ ಕ್ಷಮೆ ಕೇಳಿ ಎಂದಿದ್ದಾರೆ.

https://www.instagram.com/p/DbmsbO5Rv8F/?utm_source=ig_embed&ig_rid=AUS_Qs4SQ8f1n5amIMAeU5b

ಘಟನೆ ಹಿನ್ನೆಲೆ ಏನು?

ನಿನ್ನೆ ತಂಜಾವೂರಿನಲ್ಲಿ ನಡೆದ ಸಮಾವೇಶವೊಂದರಲ್ಲಿ ಕಾವೇರಿ ನೀರಿನ ಬಗ್ಗೆ ಮಾತನಾಡುವ ವೇಳೆ ಉದಯನಿಧಿ ಸ್ಟಾಲಿನ್‌, ಸಿಎಂ ಜೋಸೆಫ್‌ ವಿಜಯ್‌ ಹಾಗೂ ನಟಿ ತ್ರಿಷಾ ಕೃಷ್ಣನ್‌ ನಡುವೆ ಸಂಬಂಧ ಕಲ್ಪಿಸಿ ಡಬಲ್‌ ಮೀನಿಂಗ್‌ ಬರುವಂತೆ ಮಾತನಾಡಿದ್ದರು. ಜನರಿಗೆ ಹನಿ ಕಾವೇರಿ ನೀರು ಸಿಕ್ಕಿಲ್ಲ ಎಂದರೂ ಸಿಎಂಗೆ ಕಾಳಜಿಯಿಲ್ಲ ಎಂದು ಹೇಳುವಾಗ ಜನರು ಇದ್ದಕ್ಕಿದ್ದಂತೆಯೇ ತ್ರಿಷಾ ತ್ರಿಷಾ ಎಂದು ಕೂಗಿದರು. ಆಗ ಸ್ಟಾಲಿನ್‌ ʼನೀರು ಬೇರೆಲ್ಲಿ ತಲುಪುತ್ತದೋ ಇಲ್ಲವೋ, ಅಲ್ಲಿಗೆ ತಲುಪಬೇಕುʼ ಎಂದು ಡಬಲ್‌ ಮೀನಿಂಗ್‌ ಕಮೆಂಟ್‌ ಮಾಡಿದ್ದರು. ಇದಕ್ಕೆ ಬೆಂಬಲಿಗರು ಶಿಳ್ಳೆ ಹೊಡೆದು ಚಪ್ಪಾಳೆ ತಟ್ಟಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !