August 5, 2026
Wednesday, August 5, 2026
spot_img

ಮನೆಯಲ್ಲಿ ಸ್ವೀಟ್‌ಕಾರ್ನ್‌ ಇದೆ ಆದರೆ ಏನು ಮಾಡೋದು ಗೊತ್ತಾಗ್ತಿಲ್ವಾ? ಚೀಸಿ ಡಿಶ್‌ ಇಂದೇ ಟ್ರೈ ಮಾಡಿ

ಮನೆಯಲ್ಲಿ ಸ್ವೀಟ್‌ಕಾರ್ನ್‌ ತಂದು ತುಂಬಾ ದಿನಗಳಾಗಿದೆ. ಆದರೆ ಅದರಿಂದ ಯಾವ ಅಡುಗೆಯನ್ನೂ ತಯಾರಿಸೋಕೆ ಆಗಿಲ್ಲ ಎನ್ನುವವರು ನಮ್ಮ ಈ ಸಿಂಪಲ್‌ ಚೀಸಿ ಸ್ವೀಟ್‌ಕಾರ್ನ್‌ ರೆಸಿಪಿ ಟ್ರೈ ಮಾಡಿ. ಇದನ್ನು ಮಕ್ಕಳು, ವಯಸ್ಸಾದವರು ಕೂಡ ಎಂಜಾಯ್‌ ಮಾಡ್ತಾರೆ. ಇದನ್ನು ಹಾಗೇ ತಿನ್ನಬಹುದು ಇಲ್ಲವಾದ್ರೆ ಬ್ರೆಡ್‌ ಮೇಲೆ ಹಾಕಿಕೊಂಡು ಕೂಡ ತಿನ್ನಬಹುದು. ಸಿಂಪಲ್‌ ಸ್ಟೆಪ್‌ನಲ್ಲಿ ವಿವರಿಸ್ತೀವಿ ನೋಡಿ..

ಸಾಮಾಗ್ರಿಗಳು: ಕಾರ್ನ್‌, ಚಿಲ್ಲಿ ಫ್ಲೇಕ್ಸ್‌, ಬೆಣ್ಣೆ, ಆರಿಗ್ಯಾನೊ, ಚೀಸ್‌, ಕಾರ್ನ್‌ಫ್ಲೋರ್‌, ಹಾಲು

ಮಾಡುವ ವಿಧಾನ

ಮೊದಲು ಸ್ವೀಟ್‌ಕಾರ್ನ್‌ನ್ನು ಬೇಯಿಸಿಕೊಳ್ಳಿ. ಆನಂತರ ಅದನ್ನು ತಣ್ಣಗಾಗಲು ಬಿಡಿ

ಪ್ಯಾನ್‌ಗೆ ಬೆಣ್ಣೆ ಹಾಕಿ, ಸ್ವೀಟ್‌ ಕಾರ್ನ್‌ ಹಾಕಿ, ಉಪ್ಪು ಹಾಕಿ ಚೆನ್ನಾಗಿ ರೋಸ್ಟ್‌ ಮಾಡಿಕೊಳ್ಳಿ

ಆನಂತರ ಇದಕ್ಕೆ ಕಾರ್ನ್‌ಫ್ಲೋರ್‌ ಸ್ಲರಿ, ಆರಿಗ್ಯಾನೊ, ಚಿಲ್ಲಿ ಫ್ಲೇಕ್ಸ್‌ ಹಾಗೂ ಸ್ವಲ್ಪ ಹಾಲು ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ

ಎರಡೇ ನಿಮಿಷದಲ್ಲಿ ನಿಮಗೆ ಅಡುಗೆಯಿಂದ ಘಮ ಬರುತ್ತದೆ. ಆಗ ಒಲೆ ಆರಿಸಿ ಬಿಸಿ ಬಿಸಿ ತಿನ್ನಿ. ಕಾರ್ನ್‌ಫ್ಲೋರ್‌ ಇಲ್ಲ ಎಂದವರು ಒಂದು ಸ್ಪೂನ್‌ ಮೈದಾಹಿಟ್ಟನ್ನು ಹಾಕಿಯೂ ಮಿಕ್ಸ್‌ ಮಾಡಬಹುದು. ಆನಂತರ ಹಾಲು ಹಾಕಿದ್ರೆ ಡಿಶ್‌ ರೆಡಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !