ಮೇಷ
ವಾಹನ ಚಾಲನೆಯಲ್ಲಿ ತುಸು ಎಚ್ಚರ ವಹಿಸಿ. ವೃತ್ತಿಯಲ್ಲಿ ಶ್ಲಾಘನೆ. ಧನಪ್ರಾಪ್ತಿ ಹೆಚ್ಚಳ. ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಕಾಡಬಹುದು.
ವೃಷಭ
ಕಂಡದ್ದನ್ನೆಲ್ಲ ಖರೀದಿಸುವ ಹುಮ್ಮಸ್ಸು ನಿಯಂತ್ರಿಸಿ. ಉಳಿತಾಯ ಮಾಡಲೂ ಗಮನ ಕೊಡಿ. ಕೆಲವರ ಟೀಕೆ ಎದುರಿಸುವಿರಿ.
ಮಿಥುನ
ಪ್ರೀತಿಪಾತ್ರರ ಜತೆ ಹೆಚ್ಚು ಕಾಲ ಕಳೆಯಿರಿ. ಅವರ ಬೇಕುಬೇಡ ಆಲಿಸಿರಿ. ವೃತ್ತಿಯಲ್ಲಿ ಅನಪೇಕ್ಷಿತ ಬೆಳವಣಿಗೆ ಸಂಭವಿಸಬಹುದು.
ಕಟಕ
ಕೆಲ ಸನ್ನಿವೇಶಗಳಲ್ಲಿ ಭಾವುಕರಾಗಿ ವರ್ತಿಸದಿರಿ. ಮನೋದಾರ್ಢ್ಯ ಪ್ರದರ್ಶಿಸಿ. ಆರ್ಥಿಕ ಹಿನ್ನಡೆ. ಇಷ್ಟದ ವಸ್ತು ಖರೀದಿ ಕಷ್ಟವಾದೀತು.
ಸಿಂಹ
ಅನಿರೀಕ್ಷಿತ ಬಿಕ್ಕಟ್ಟು. ಅದರ ನಿಭಾವಣೆ ಕಷ್ಟ ಎನಿಸಬಹುದು. ಸಂಜೆ ವೇಳೆಗೆ ಎಲ್ಲವೂ ಸುರಳೀತ ಆಗುವ ಸಂಕೇತ ತೋರಲಿದೆ. ಧನಹಾನಿ.
ಕನ್ಯಾ
ಗುರಿಯಿಂದ ವಿಚಲಿತಗೊಳಿಸುವ ಕೆಲವು ವಿಚಾರಗಳು ಕಾಡಬಹುದು. ಅತ್ತ ಗಮನ ಹರಿಸದಿರಿ. ಚಿಂತೆ ಪರಿಹಾರ ಕಾಣಲಿದೆ.
ತುಲಾ
ಖಾಸಗಿ ಬದುಕಲ್ಲಿ ನಿರೀಕ್ಷಿತ ಫಲ ಇಂದು ದೊರಕದು. ನಿರಾಶೆ. ಆರೋಗ್ಯದ ಬಗ್ಗೆ ಚಿಂತೆ ಇದ್ದರೆ ನಿರಾಳತೆ ಸಿಗಲಿದೆ. ಧನವ್ಯಯ ಹೆಚ್ಚು.
ವೃಶ್ಚಿಕ
ಸಮಸ್ಯೆ ತಾನಾಗಿ ಪರಿಹಾರ ಕಾಣಲು ಸಮಯ ಕೊಡಿ. ನಿಮ್ಮ ಪ್ರಯತ್ನ ಈಗಲೇ ಫಲ ನೀಡದು. ಹಣದ ವ್ಯವಹಾರ ನಿರಾಳ.
ಧನು
ಏಕಕಾಲದಲ್ಲಿ ಬಹಳ ಕೆಲಸ ಆಗಬೇಕೆಂದು ಬಯಸುವಿರಿ. ಅದರಿಂದ ಒತ್ತಡ ಹೆಚ್ಚು. ಅಹಿತ ಆಹಾರ ಸೇವನೆಯಿಂದ ಹೊಟ್ಟೆ ಕೆಡಬಹುದು.
ಮಕರ
ಬಾಕಿ ಇರುವ ಕೆಲಸ ಮೊದಲು ಮುಗಿಸಿ. ಅದುವೇ ನಿಮ್ಮ ಚಿಂತೆಗೆ ಕಾರಣವಾಗುತ್ತಿರುವುದು. ಅಜೀರ್ಣ ಸಮಸ್ಯೆಯಿಂದ ಮುಕ್ತಿ, ಆರೋಗ್ಯ ಸ್ಥಿರ.
ಕುಂಭ
ಕಾಡುವ ಸಮಸ್ಯೆಗೆ ಪರಿಹಾರ ಹುಡುಕಿ. ಅದರಷ್ಟಕ್ಕೆ ಬಿಡಬೇಡಿ. ಆಪ್ತೇಷ್ಟರ ಕಾಳಜಿ ಇಂದು ಮುಖ್ಯವಾಗಲಿದೆ. ದೈಹಿಕ ನೋವು ಶಮನವಾಗಲಿದೆ.
ಮೀನ
ವೃತ್ತಿಯಲ್ಲಿ ಯಶಸ್ಸು. ಸಂಗಾತಿ ಜತೆ ಭಿನ್ನಮತ ಇದ್ದರೆ ಅದರ ಪರಿಹಾರಕ್ಕೆ ಆದ್ಯತೆ ಕೊಡಿ. ಅಲರ್ಜಿ ಸಂಬಂಧ ಅನಾರೋಗ್ಯ ಬಾಧಿಸಬಹುದು.



