ಸಾಮಾನ್ಯವಾಗಿ ಮಸಾಲೆ ದೋಸೆಗೆ ಎಲ್ಲರೂ ಕಾಯಿ ಚಟ್ನಿಯನ್ನು ಇಷ್ಟಪಡುತ್ತಾರೆ. ಹೊಟೇಲ್ಗಳಲ್ಲಿ ಕೂಡ ಇದೇ ಚಟ್ನಿ ನೀಡುವುದರಿಂದ ಇದೊಂದು ಟ್ರೆಂಡ್ ಆಗಿದೆ. ಆದರೆ ಮನೆಯಲ್ಲಿ ಮಾಡುವ ರುಚಿಯಾದ ಗಟ್ಟಿ ಶೇಂಗಾ ಚಟ್ನಿಯನ್ನು ದೋಸೆ ಜೊತೆ ತಿಂದ್ರೆ ರುಚಿ ಅದ್ಭುತವಾಗಿರುತ್ತದೆ. ಹೇಳೋದರ ಮೇಲೆ ನಂಬಿಕೆ ಇಲ್ಲವಾದ್ರೆ ಇಂದೇ ಟ್ರೈ ಮಾಡಿ ನೋಡಿ, ಶೇಂಗಾ ಚಟ್ನಿ ರುಚಿ ಹತ್ತಿದವರಿಗೆ ಬೇರೆ ಯಾವ ಚಟ್ನಿಯೂ ಇಷ್ಟವಾಗೋದಿಲ್ಲ. ಹೇಗೆ ಮಾಡೋದು ನೋಡೋಣ ಬನ್ನಿ..
ಸಾಮಾಗ್ರಿಗಳು : ಶೇಂಗಾ, ಕಡ್ಲೆ, ಹಸಿಮೆಣಸು, ಒಣಮೆಣಸು, ಕಾಯಿ, ಶುಂಠಿ, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು, ಹುಣಸೆಹಣ್ಣು
ಮಾಡುವ ವಿಧಾನ
ಮೊದಲು ಬಾಣಲೆಗೆ ಶೇಂಗಾ ಹಾಕಿ ಹುರಿದುಕೊಳ್ಳಿ, ಆನಂತರ ಮೆಣಸಿನಕಾಯಿ ಹಾಕಿ ರೋಸ್ಟ್ ಮಾಡಿಕೊಳ್ಳಿ
ಇದೆಲ್ಲಾ ತಣ್ಣಗಾದ ನಂತರ ಮಿಕ್ಸಿಗೆ ಹಾಕಿ
ಜೊತೆಗೆ ಕಾಯಿ, ಕಡ್ಲೆ, ಮೆಣಸಿನಕಾಯಿ, ಹುಣಸೆಹುಳಿ, ಕೊತ್ತಂಬರಿ ಸೊಪ್ಪು, ಶುಂಠಿ, ಬೆಳ್ಳುಳ್ಳಿ ಎಲ್ಲವನ್ನೂ ಹಾಕಿ, ನೀರು ಹಾಕಿ ರುಬ್ಬಿಕೊಳ್ಳಿ
ನಂತರ ಇದಕ್ಕೆ ಹಿಂಗ್, ಕಡ್ಲೆಬೇಳೆ, ಉದ್ದಿನಬೇಳೆಯ ಒಗರಣೆ ಹಾಕಿ ಬಿಸಿ ಬಿಸಿ ದೋಸೆ ಜೊತೆ ತಿನ್ನಿ



