ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಿಚ್ಚ ಸುದೀಪ ಹೋಸ್ಟ್ ಮಾಡುವ, ಕನ್ನಡದ ಹೆಸರಾಂತ ರಿಯಾಲಿಟಿ ಶೋ ಬಿಗ್ಬಾಸ್ನ ಮೊದಲ ದಿನದ ಸ್ಟೇಜ್ ಶೂಟ್ನ್ನು ಲೈವ್ ಆಗಿ ನೋಡೋಕೆ ಕಲರ್ಸ್ ತಂಡ ಸುವರ್ಣಾವಕಾಶವೊಂದನ್ನು ನೀಡಿದೆ.
ಆದರೆ ಈ ಅವಕಾಶವನ್ನು ಪಡೆಯೋದಕ್ಕಾಗಿ ನೀವು ಬೆಂಗಳೂರಿನ ಲಾಲ್ಬಾಗ್ನಲ್ಲಿ ನಡೆಯುತ್ತಿರುವ ಫ್ಲವರ್ ಶೋಗೆ ಹೋಗೋದು ಮುಖ್ಯವಾಗಿದೆ. ಫ್ಲವರ್ ಶೋಗೂ ಬಿಗ್ಬಾಸ್ಗೂ ಏನು ಸಂಬಂಧ ಅಂತೀರಾ? ಸುದ್ದಿಯನ್ನು ಡೀಟೇಲ್ ಆಗಿ ಓದಿ..
ಇನ್ನೇನು ಕೆಲವೇ ದಿನಗಳಲ್ಲಿ ಬಿಗ್ಬಾಸ್ ಸೀಸನ್ 13ರ ಗ್ರ್ಯಾಂಡ್ ಓಪನಿಂಗ್ ನಡೆಯಲಿದೆ. ಈ ವೇಳೆ ಸ್ಪರ್ಧಿಗಳ ಇಂಟ್ರಡಕ್ಷನ್ ಹಾಗೂ ಅವರು ಮನೆಯೊಳಗೆ ಹೋಗೋದನ್ನು ಲೈವ್ ಆಗಿ ನೋಡಬೇಕಾದ್ರೆ ಲಾಲ್ಬಾಗ್ನ ಫ್ಲವರ್ಶೋದಲ್ಲಿರುವ ಬಿಗ್ಬಾಸ್ ಅಗ್ನಿಪರೀಕ್ಷೆ ಎಕ್ಸ್ಪೀರಿಯನ್ಸ್ ಝೋನ್ಗೆ ವಿಸಿಟ್ ಮಾಡಬೇಕು.
ಪ್ರೀಮಿಯರ್ ಪ್ರಮೋಷನ್
ಬಿಗ್ಬಾಸ್ ತಂಡ ಈ ಬಾರಿ ತಮ್ಮ ಸೀಸನ್ನ್ನು ಪ್ರಮೋಟ್ ಮಾಡೋದಕ್ಕಾಗಿ ಫ್ಲವರ್ ಶೋನಲ್ಲಿ ‘ಬಿಗ್ಬಾಸ್ ಅಗ್ನಿಪರೀಕ್ಷೆ ಎಕ್ಸ್ಪೀರಿಯನ್ಸ್ ಜೋನ್’ ಆರಂಭಿಸಿದೆ. ಇದರಲ್ಲಿ ಬಿಗ್ಬಾಸ್ ಕುರ್ಚಿ ಇಡಲಾಗಿದೆ. ಇಲ್ಲಿರುವ ಸೆಲ್ಫಿ ಜೋನ್ನಲ್ಲಿ ಫೋಟೊ ತೆಗೆದುಕೊಂಡು ಇನ್ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಮಾಡಬೇಕಿದೆ. ಫೋಟೊ ಪಬ್ಲಿಕ್ ಅಕೌಂಟ್ನಿಂದ ಅಪ್ಲೋಡ್ ಮಾಡಬೇಕು. ಹಾಗೆಯೇ ಇಲ್ಲಿ #BBKAGNIPARIKSHE, ಬಿಬಿಕೆಅಗ್ನಿಪರೀಕ್ಷೆ ಎನ್ನುವ ಹ್ಯಾಷ್ಟ್ಯಾಗ್ ಬಳಕೆ ಮಾಡಬೇಕು. ಜೊತೆಗೆ ಮಿಸ್ ಮಾಡದೇ ಕಲರ್ಸ್ ಕನ್ನಡವನ್ನು ಕೂಡ ಟ್ಯಾಗ್ ಮಾಡಬೇಕಿದೆ.
ಕೆಲವರಿಗೆ ಮಾತ್ರ ಅವಕಾಶ
ಈ ರೀತಿ ಫೋಟೊ ಅಪ್ಲೋಡ್ ಮಾಡಿದ ಕೆಲವರಿಗೆ ಮಾತ್ರ ಎಂಟ್ರಿ ಶೂಟ್ ಅಥವಾ ವೀಕೆಂಡ್ ಶೂಟ್ನ್ನು ಲೈವ್ ಆಗಿ ನೋಡೋದಕ್ಕೆ ಆಹ್ವಾನ ಸಿಗಲಿದೆ. ಜೊತೆಗೆ ಬಿಗ್ಬಾಸ್ ಬಹುಮಾನಗಳನ್ನು ಗೆಲ್ಲುವ ಅವಕಾಶ ಸಹ ಲಭಿಸಲಿದೆ.



