August 6, 2026
Thursday, August 6, 2026
spot_img

ಬಿಗ್‌ಬಾಸ್‌ ಲೈವ್‌ ಆಗಿ ನೋಡೋಕೆ ಟಿಕೆಟ್‌ ಬೇಕಾ? ಹಾಗಿದ್ರೆ ಮೊದಲು ಲಾಲ್‌ಬಾಗ್‌ ಫ್ಲವರ್‌ ಶೋಗೆ ಹೋಗಿಬನ್ನಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕಿಚ್ಚ ಸುದೀಪ ಹೋಸ್ಟ್‌ ಮಾಡುವ, ಕನ್ನಡದ ಹೆಸರಾಂತ ರಿಯಾಲಿಟಿ ಶೋ ಬಿಗ್‌ಬಾಸ್‌ನ ಮೊದಲ ದಿನದ ಸ್ಟೇಜ್‌ ಶೂಟ್‌ನ್ನು ಲೈವ್‌ ಆಗಿ ನೋಡೋಕೆ ಕಲರ್ಸ್‌ ತಂಡ ಸುವರ್ಣಾವಕಾಶವೊಂದನ್ನು ನೀಡಿದೆ.

ಆದರೆ ಈ ಅವಕಾಶವನ್ನು ಪಡೆಯೋದಕ್ಕಾಗಿ ನೀವು ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ನಡೆಯುತ್ತಿರುವ ಫ್ಲವರ್‌ ಶೋಗೆ ಹೋಗೋದು ಮುಖ್ಯವಾಗಿದೆ. ಫ್ಲವರ್‌ ಶೋಗೂ ಬಿಗ್‌ಬಾಸ್‌ಗೂ ಏನು ಸಂಬಂಧ ಅಂತೀರಾ? ಸುದ್ದಿಯನ್ನು ಡೀಟೇಲ್‌ ಆಗಿ ಓದಿ..

ಇನ್ನೇನು ಕೆಲವೇ ದಿನಗಳಲ್ಲಿ ಬಿಗ್‌ಬಾಸ್‌ ಸೀಸನ್ 13ರ ಗ್ರ್ಯಾಂಡ್ ಓಪನಿಂಗ್ ನಡೆಯಲಿದೆ.‌ ಈ ವೇಳೆ ಸ್ಪರ್ಧಿಗಳ ಇಂಟ್ರಡಕ್ಷನ್‌ ಹಾಗೂ ಅವರು ಮನೆಯೊಳಗೆ ಹೋಗೋದನ್ನು ಲೈವ್‌ ಆಗಿ ನೋಡಬೇಕಾದ್ರೆ ಲಾಲ್‌ಬಾಗ್‌ನ ಫ್ಲವರ್‌ಶೋದಲ್ಲಿರುವ ಬಿಗ್‌ಬಾಸ್‌ ಅಗ್ನಿಪರೀಕ್ಷೆ ಎಕ್ಸ್‌ಪೀರಿಯನ್ಸ್‌ ಝೋನ್‌ಗೆ ವಿಸಿಟ್‌ ಮಾಡಬೇಕು.

ಪ್ರೀಮಿಯರ್‌ ಪ್ರಮೋಷನ್‌

ಬಿಗ್‌ಬಾಸ್‌ ತಂಡ ಈ ಬಾರಿ ತಮ್ಮ ಸೀಸನ್‌ನ್ನು ಪ್ರಮೋಟ್‌ ಮಾಡೋದಕ್ಕಾಗಿ ಫ್ಲವರ್‌ ಶೋನಲ್ಲಿ ‘ಬಿಗ್​​ಬಾಸ್ ಅಗ್ನಿಪರೀಕ್ಷೆ ಎಕ್ಸ್ಪೀರಿಯನ್ಸ್ ಜೋನ್’ ಆರಂಭಿಸಿದೆ. ಇದರಲ್ಲಿ ಬಿಗ್‌ಬಾಸ್‌ ಕುರ್ಚಿ ಇಡಲಾಗಿದೆ. ಇಲ್ಲಿರುವ ಸೆಲ್ಫಿ ಜೋನ್‌ನಲ್ಲಿ ಫೋಟೊ ತೆಗೆದುಕೊಂಡು ಇನ್ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್‌ ಮಾಡಬೇಕಿದೆ. ಫೋಟೊ ಪಬ್ಲಿಕ್‌ ಅಕೌಂಟ್‌ನಿಂದ ಅಪ್‌ಲೋಡ್‌ ಮಾಡಬೇಕು. ಹಾಗೆಯೇ ಇಲ್ಲಿ #BBKAGNIPARIKSHE, ಬಿಬಿಕೆಅಗ್ನಿಪರೀಕ್ಷೆ ಎನ್ನುವ ಹ್ಯಾಷ್‌ಟ್ಯಾಗ್‌ ಬಳಕೆ ಮಾಡಬೇಕು. ಜೊತೆಗೆ ಮಿಸ್‌ ಮಾಡದೇ ಕಲರ್ಸ್‌ ಕನ್ನಡವನ್ನು ಕೂಡ ಟ್ಯಾಗ್‌ ಮಾಡಬೇಕಿದೆ.

ಕೆಲವರಿಗೆ ಮಾತ್ರ ಅವಕಾಶ

ಈ ರೀತಿ ಫೋಟೊ ಅಪ್‌ಲೋಡ್‌ ಮಾಡಿದ ಕೆಲವರಿಗೆ ಮಾತ್ರ ಎಂಟ್ರಿ ಶೂಟ್‌ ಅಥವಾ ವೀಕೆಂಡ್‌ ಶೂಟ್‌ನ್ನು ಲೈವ್‌ ಆಗಿ ನೋಡೋದಕ್ಕೆ ಆಹ್ವಾನ ಸಿಗಲಿದೆ. ಜೊತೆಗೆ ಬಿಗ್​​ಬಾಸ್ ಬಹುಮಾನಗಳನ್ನು ಗೆಲ್ಲುವ ಅವಕಾಶ ಸಹ ಲಭಿಸಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !