ಮೂಳೆಗಳಿಗೆ ಮತ್ತು ದೇಹಕ್ಕೆ ತಕ್ಷಣದ ಶಕ್ತಿ ನೀಡಲು ಅಜ್ಜಿಯ ಕಾಲದ ಈ ಸಾಂಪ್ರದಾಯಿಕ ಕುಚಲಕ್ಕಿ ಉಂಡೆ ಅತ್ಯುತ್ತಮ ಮನೆಮದ್ದು. ಸಕ್ಕರೆ ಮತ್ತು ಎಣ್ಣೆ ಎರಡನ್ನೂ ಬಳಸದೆ ಕೇವಲ 3 ಸಾಮಗ್ರಿಗಳಿಂದ 15 ನಿಮಿಷಗಳಲ್ಲಿ ಇದನ್ನು ಮಾಡಬಹುದು.
ಬೇಕಾಗುವ ಸಾಮಗ್ರಿಗಳು:
ಕುಚಲಕ್ಕಿ
ಬೆಲ್ಲ
ತುರಿದ ಒಣ ಕೊಬ್ಬರಿ
ಏಲಕ್ಕಿ ಪುಡಿ
ತುಪ್ಪ
ಮಾಡುವ ವಿಧಾನ:
ಮೊದಲು ಕುಚಲಕ್ಕಿಯನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ಬಾಣಲೆಯನ್ನು ಬಿಸಿ ಮಾಡಿ, ಅಕ್ಕಿಯನ್ನು ಹಾಕಿ ಸಣ್ಣ ಉರಿಯಲ್ಲಿ ಹುರಿದು, ಅಕ್ಕಿ ಚೆನ್ನಾಗಿ ಉಬ್ಬಿ, ಗರಿಗರಿಯಾಗಿ ಪಾಪ್ಕಾರ್ನ್ ತರಹ ಸಿಡಿಯಲು ಆರಂಭವಾಗುವವರೆಗೆ ಹುರಿದು, ಒಂದು ತಟ್ಟೆಗೆ ಹಾಕಿ ಪೂರ್ತಿಯಾಗಿ ಆರಲು ಬಿಡಬೇಕು. ಆರಿದ ಅಕ್ಕಿಯನ್ನು ಮಿಕ್ಸಿ ಜಾರ್ಗೆ ಹಾಕಿ ಸ್ವಲ್ಪ ತರಿತರಿಯಾಗಿ ಪುಡಿ ಮಾಡಿ. ಈಗ ಅದೇ ಮಿಕ್ಸಿ ಜಾರ್ಗೆ ಪುಡಿ ಮಾಡಿದ ಬೆಲ್ಲ, ತುರಿದ ಒಣ ಕೊಬ್ಬರಿ ಮತ್ತು ಏಲಕ್ಕಿ ಪುಡಿ ಸೇರಿಸಿ. ಎಲ್ಲವೂ ಒಂದಕ್ಕೊಂದು ಚೆನ್ನಾಗಿ ಬೆರೆಯಲು ಮಿಕ್ಸಿಯನ್ನು ಕೇವಲ 10 ಸೆಕೆಂಡುಗಳ ಕಾಲ ಒಂದೆರಡು ಬಾರಿ ಪಲ್ಸ್ ಮಾಡಿ. ಈ ಮಿಶ್ರಣವನ್ನು ಒಂದು ಪಾತ್ರೆಗೆ ತಗೆದುಕೊಂಡು. ಕೊಬ್ಬರಿ ಮತ್ತು ಬೆಲ್ಲದಲ್ಲಿನ ತೇವಾಂಶದಿಂದಲೇ ಹಿಟ್ಟು ಉಂಡೆ ಕಟ್ಟಲು ಬರುತ್ತದೆ. ಕೈಯಿಂದ ಚೆನ್ನಾಗಿ ಕಿವುಚಿ ನಿಮಗೆ ಬೇಕಾದ ಗಾತ್ರದ ಉಂಡೆಗಳನ್ನು ಕಟ್ಟಿದರೆ ‘ಕುಚಲಕ್ಕಿ ಉಂಡೆ’ ಸಿದ್ಧ.



