ಹೊಸದಿಗಂತ ವರದಿ ಯಲ್ಲಾಪುರ:
ಯಲ್ಲಾಪುರ ಪಟ್ಟಣದ ಎಪಿಎಂಸಿ ಸಮೀಪದ ಜಮೇಜಡ್ಡಿ ಕ್ರಾಸ್ ಬಳಿ, ಕಾರು ಹಾಗೂ ಬುಲೆರೋ ಪಿಕ್ ಅಪ್ ವಾಹನದ ನಡುವೆ ಅಪಘಾತ ಸಂಭವಿಸಿ ಇಬ್ಬರೂ ಗಾಯಗೊಂಡಿರುವ ಘಟನೆ ನಡೆದಿದೆ.
ಈ ಅಪಘಾತದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಯಲ್ಲಾಪುರದ ಶ್ರೀಪಾದ ಭಟ್ಟ ಹಾಗೂ ಲಕ್ಷ್ಮೀ ದೇಸಾಯಿ ಅವರಿಗೆ ಗಾಯವಾಗಿದೆ. ಅಪಘಾತದ ರಭಸಕ್ಕೆ ಬುಲೆರೋ ವಾಹನವು ರಸ್ತೆಯ ಅಂಚಿಗೆ ಇಳಿದು, ಕಾಡಿಗೆ ನುಗ್ಗಿದೆ.
ಇದನ್ನೂ ಓದಿ:
ಅಪಘಾತದಲ್ಲಿ ಕಾರು ಹಾಗೂ ಪಿಕ್ ಅಪ್ ವಾಹನ ಜಖಂಗೊಂಡಿವೆ. ಕೆಲವು ಸಮಯ ಈ ರಸ್ತೆಯಲ್ಲಿ ವಾಹನ ಸಂಚಾರ ವ್ಯತ್ಯಯವಾಗಿತ್ತು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.



