August 6, 2026
Thursday, August 6, 2026
spot_img

ನಿಗದಿತ ಸಮಯದಲ್ಲಿ ಆಸ್ಪತ್ರೆ ತಲುಪಿಸದಿದ್ದರೆ ದಂಡ: ರಾಜ್ಯದಲ್ಲಿ ಬರಲಿದೆ ಆಂಬುಲೆನ್ಸ್ ಚಾಲಕರಿಗೆ ಹೊಸ ನಿಯಮ!

ಹೊಸದಿಗಂತ ಡಿಜಿಟಲ್:

ರಾಜ್ಯದ ಗ್ರಾಮೀಣ ಭಾಗದಿಂದ 20 ನಿಮಿಷದಲ್ಲಿ ಹಾಗೂ ನಗರ ವ್ಯಾಪ್ತಿಯಲ್ಲಿ 15 ನಿಮಿಷಗಳಲ್ಲಿ ಆಂಬುಲೆನ್ಸ್ ತಾಲೂಕು ಸಾರ್ವಜನಿಕ ಆಸ್ಪತ್ರೆ ತಲುಪಬೇಕು ಅದಕ್ಕಾಗಿ ರಾಜ್ಯದಲ್ಲಿ 800 ಹೊಸ ಆಂಬುಲೆನ್ಸ್ ನೂತನ ನಿಯಮದೊಂದಿಗೆ ಚಾಲನೆಗೆ ಸಿದ್ದತೆ ನಡೆಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ ಖಾದರ್ ಹೇಳಿದ್ದಾರೆ.

ಸುಳ್ಯದಲ್ಲಿ ಪ್ರಾಕೃತಿಕ ವಿಕೋಪ ನಿರ್ವಹಣೆ ಪರಿಶೀಲನಾ ಸಭೆಯ ಬಳಿಕ ಪತ್ರಕರ್ತರ ಜೊತೆಗೆ ಮಾತನಾಡಿದ ಅವರು, ರಾಜ್ಯಾದ್ಯಂತ ವೈಧ್ಯರ ಕೊರತೆ ಇದ್ದು ನಮ್ಮ ಮೊದಲ ಆದ್ಯತೆಯಾಗಿ ವೈಧ್ಯರ ಭರ್ತಿ ಮಾಡುವುದಾಗಿದೆ. ಹಂತ ಹಂತವಾಗಿ ಹುದ್ದೆ ಭರ್ತಿಗೆ ಕ್ರಮ ವಹಿಸಲಾಗುವುದು. ಇದರ ಜೊತೆಯಲ್ಲಿ 800 ಆಂಬುಲೆನ್ಸ್ ಬಳಸಿಕೊಂಡು ನೂತನ ನಿಯಮಗಳೊಂದಿಗೆ ಜಾರಿಗೆ ತರಲು ಸಿದ್ದತೆ ನಡೆಸಲಾಗಿದೆ. ಆಂಬುಲೆನ್ಸ್, ಗ್ರಾಮೀಣ ಭಾಗದಿಂದ ಸಾರ್ವಜನಿಕ ಆಸ್ಪತ್ರೆಗೆ ೨೦ ನಿಮಿಷ ಹಾಗೂ ನಗರ ಮಟ್ಟದಿಂದ 15 ನಿಮಿಷಗಳಲ್ಲಿ ತಲುಪಬೇಕಿದ್ದು, ತಡವಾದಲ್ಲಿ ಅವರಿಗೆ ದಂಡ ವಿಧಿಸುವ ಕೆಲಸವನ್ನು ಮಾಡುತ್ತೇವೆ ಎಂದು ಅವರು ಹೇಳಿದರು.

ಇದನ್ನೂ ಓದಿ:


ಕಸ್ತೂರಿ ರಂಗನ್ ವರದಿ ಕುರಿತ ಪ್ರಶ್ನೆಗೆ ಉತ್ತರಿಸಿ ಅದು ಅರಣ್ಯ ಇಲಾಖೆಯ ಕಾನೂನು ಅದು ಅಷ್ಟು ಸುಲಭವಾಗಿಲ್ಲ ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಹಾಗೂ ಪರಿಸರವಾದಿಗಳನ್ನು ಕುಳ್ಳಿರಿಸಿ ಮಾತುಕತೆಯ ಮೂಲಕ ಸರಕಾರ ಕ್ರಮ ವಹಿಸುತ್ತದೆ ಎಂದು ಹೇಳಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !