October 14, 2026
Wednesday, October 14, 2026
spot_img

ಹುಬ್ಬಳ್ಳಿಯಲ್ಲಿ ಹೆಸ್ಕಾಂ ಎಇಇ ಕಿರಣಕುಮಾರ್‌ ಮನೆ, ಕಚೇರಿ ಸೇರಿ ನಾಲ್ಕು ಕಡೆ ಲೋಕಾ ದಾಳಿ

ಹೊಸದಿಗಂತ ವರದಿ ಹುಬ್ಬಳ್ಳಿ:

ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಬೆಳ್ಳಂಬೆಳ್ಳಿಗೆ ಹೆಸ್ಕಾಂ ಎಇಇ ಕಿರಣಕುಮಾರ ಮನೆ, ಕಚೇರಿ‌ ಸೇರಿ ನಾಲ್ಕು ಕಡೆ ದಾಳಿ ನಡೆಸಿದ್ದಾರೆ‌.

ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿದ ಆರೋಪದ ಮೇಲೆ ಲೋಕಾಯುಕ್ತ ಅಧಿಕಾರಿಗಳು, ಅಕ್ಷಯ ಕಾಲೊನಿ ಸಮೀಪದ ತೋಳನಕೆರೆ ಬಳಿ ಇರುವ ಅವರ ಮನೆ ಹಾಗೂ ತಬೀಬಲ್ಯಾಂಡ್‌ನ ಹೆಸ್ಕಾಂನ ಅವರ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ.

ಅಲ್ಲದೆ, ಅವರ ಪತ್ನಿ ಪ್ರೀತಿ ಬೈಂದೂರ ಸಹ ಹೆಸ್ಕಾಂ ಎಇಇ ಆಗಿದ್ದು, ಗೋಪನಕೊಪ್ಪದಲ್ಲಿರುವ ಹೆಸ್ಕಾಂನ ಅವರ ಕಚೇರಿ ಮೇಲೂ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಕಿರಣಕುಮಾರ ಅವರ ಸಹೋದರ ಧಾರವಾಡದಲ್ಲಿ ವಾಸವಾಗಿದ್ದು, ಅವರ ಮನೆಯ ಮೇಲೂ ದಾಳಿ ನಡೆಸಿರುವ ಅಧಿಕಾರಿಗಳ ಇನ್ನೊಂದು ತಂಡ ಮಾಹಿತಿ ಸಂಗ್ರಹಿಸುತ್ತಿದೆ.

ಧಾರವಾಡ ಲೋಕಾಯುಕ್ತ ಎಸ್‌ಪಿ ಸಿದ್ದಲಿಂಗಪ್ಪ ಮತ್ತು ಡಿವೈಎಸ್‌ಪಿ ಬಸವರಾಜ ಬುದ್ನಿ ತಂಡದಲ್ಲಿ‌ ಇದ್ದಾರೆ.

Must Read