ಹೊರಗಡೆ ತಂಪಾದ ವಾತಾವರಣ, ಜಿಟಿಜಿಟಿ ಸುರಿಯುವ ಮಳೆ ಹಾಗೂ ತಣ್ಣನೆ ಗಾಳಿ ಬೀಸುತ್ತಿರುವಾಗ ಬಿಸಿಬಿಸಿಯಾದ ತಿಂಡಿ ತಿನ್ನಬೇಕು ಎನಿಸುವುದು ಸಹಜ. ಇಂತಹ ಮಳೆಗಾಲದ ಸಂಜೆಯ ವೇಳೆಗೆ ಮ್ಯಾಗಿ ಅತ್ಯುತ್ತಮ ಆಯ್ಕೆಯಾಗಿದೆ. ಪ್ರತಿಯೊಬ್ಬರ ನೆಚ್ಚಿನ ಆಹಾರವಾಗಿರುವ ಮ್ಯಾಗಿಗೆ ಚೀಸ್ ಹಾಗೂ ಕಾರ್ನ್ ಸೇರಿಸಿದರೆ ಅದರ ರುಚಿ ದ್ವಿಗುಣಗೊಳ್ಳುತ್ತದೆ.
ಬೇಕಾಗುವ ಪದಾರ್ಥಗಳು
- ಮ್ಯಾಗಿ ಮತ್ತು ಮ್ಯಾಗಿ ಮಸಾಲಾ – 1 ಪ್ಯಾಕೆಟ್
- ಬೇಯಿಸಿದ ಸ್ವೀಟ್ ಕಾರ್ನ್ – 1/2 ಕಪ್
- ಚೀಸ್ (ಸ್ಲೈಸ್ ಅಥವಾ ಗ್ರೇಟೆಡ್) – 1 ರಿಂದ 2
- ಬೆಣ್ಣೆ ಅಥವಾ ಎಣ್ಣೆ – 1 ಚಮಚ
- ಸಣ್ಣಗೆ ಹೆಚ್ಚಿದ ಈರುಳ್ಳಿ ಮತ್ತು ಹಸಿಮೆಣಸಿನಕಾಯಿ – ಅಗತ್ಯಕ್ಕೆ ತಕ್ಕಷ್ಟು
- ಚಿಲ್ಲಿ ಫ್ಲೇಕ್ಸ್ ಮತ್ತು ಒರೆಗಾನೊ – ರುಚಿಗೆ ತಕ್ಕಷ್ಟು
- ನೀರು – 1.5 ಕಪ್
ಸುಲಭವಾಗಿ ತಯಾರಿಸುವ ವಿಧಾನ
ಪಾತ್ರೆಯಲ್ಲಿ ಸ್ವಲ್ಪ ಬೆಣ್ಣೆ ಬಿಸಿ ಮಾಡಿ, ಹೆಚ್ಚಿದ ಈರುಳ್ಳಿ ಹಾಗೂ ಹಸಿಮೆಣಸಿನಕಾಯಿ ಹಾಕಿ ಹೊಂಬಣ್ಣ ಬರುವವರೆಗೆ ಹುರಿಯಿರಿ. ನಂತರ ಬೇಯಿಸಿದ ಸ್ವೀಟ್ ಕಾರ್ನ್ ಮತ್ತು ತರಕಾರಿಗಳನ್ನು ಹಾಕಿ 2 ನಿಮಿಷ ಬೇಯಿಸಿ. ಅಗತ್ಯಕ್ಕೆ ತಕ್ಕಷ್ಟು ನೀರು, ಮ್ಯಾಗಿ ಮಸಾಲಾ ಹಾಕಿ ನೀರು ಕುದಿಬಂದ ಮೇಲೆ ಮ್ಯಾಗ್ಗಿ ನೂಡಲ್ಸ್ ಸೇರಿಸಿ. ಮ್ಯಾಗಿ ಬೆಂದ ಮೇಲೆ, ಉರಿದ ಚೀಸ್, ಚಿಲ್ಲಿ ಫ್ಲೇಕ್ಸ್ ಮತ್ತು ಒರೆಗಾನೊ ಉದುರಿಸಿ. ಪಾತ್ರೆಯನ್ನು ಮುಚ್ಚಿ 1-2 ನಿಮಿಷ ಚೀಸ್ ಕರಗಲು ಬಿಡಿ.
ಈಗ ನಿಮ್ಮ ಮುಂದೆ ಬಿಸಿಬಿಸಿಯಾದ, ಕ್ರಿಮಿಯಾದ ಚೀಸ್ ಕಾರ್ನ್ ಮ್ಯಾಗಿ ಸಿದ್ಧವಾಗಿದೆ.



