September 27, 2026
Sunday, September 27, 2026
spot_img

SNACKS | ಸಂಜೆ ಚಹಾಕ್ಕೆ ಪರ್ಫೆಕ್ಟ್ ಸ್ನ್ಯಾಕ್: 15 ನಿಮಿಷಗಳಲ್ಲಿ ಮಾಡಿ ಕ್ರಿಸ್ಪಿ ಬ್ರೆಡ್ ಪಕೋಡಾ

ಸಂಜೆ ಚಹಾದ ಜತೆ ಸವಿಯಲು ಗರಿಗರಿಯಾದ ಹಾಗೂ ಮಸಾಲೆಯುಕ್ತ ಸ್ನ್ಯಾಕ್ಸ್ ಹುಡುಕುತ್ತಿದ್ದೀರಾ? ಹಾಗಿದ್ದರೆ ಕೇವಲ 15 ನಿಮಿಷಗಳಲ್ಲಿ ಮನೆಯಲ್ಲೇ ಹೋಟೆಲ್ ರುಚಿಯ ಆಲೂ ಸ್ಟಫ್ಟ್ ಬ್ರೆಡ್ ಪಕೋಡಾವನ್ನು ಇಂದೇ ಟ್ರೈ ಮಾಡಿ.

ಬೇಕಾಗುವ ಸಾಮಾಗ್ರಿಗಳು

ಬ್ರೆಡ್ ಸ್ಲೈಸ್‌, ಆಲೂಗಡ್ಡೆ

ಹಸಿಮೆಣಸಿನಕಾಯಿ

ಶುಂಠಿ-ಬೆಳ್ಳುಳ್ಳಿ ಪೇಸ್ಟ್

ಕೊತ್ತಂಬರಿ ಸೊಪ್ಪು

ಅರಿಶಿನ ಪುಡಿ, ಖಾರದ ಪುಡಿ, ಗರಂ ಮಸಾಲಾ

ಚಾಟ್ ಮಸಾಲಾ ಅಥವಾ ಆಮ್‌ಚೂರ್ ಪುಡಿ

ಉಪ್ಪು, ಎಣ್ಣೆ

ಕಡಲೆಹಿಟ್ಟು, ಅಕ್ಕಿ ಹಿಟ್ಟು

ಅಜ್ವೈನ, ಖಾರದ ಪುಡಿ

ಅಡುಗೆ ಸೋಡಾ, ನೀರು

ಮಾಡುವ ವಿಧಾನ

ಒಂದು ಬಾಣಲೆಯಲ್ಲಿ 1 ಚಮಚ ಎಣ್ಣೆ ಕಾಯಿಸಿ. ಅದಕ್ಕೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ಹಸಿರು ಮೆಣಸಿನಕಾಯಿ ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿದು, ನಂತರ ಅರಿಶಿನ, ಖಾರದ ಪುಡಿ, ಗರಂ ಮಸಾಲಾ, ಚಾಟ್ ಮಸಾಲಾ ಮತ್ತು ಉಪ್ಪು ಸೇರಿಸಿ ಕಡಿಮೆ ಉರಿಯಲ್ಲಿ ಕೈಯಾಡಿಸಿ. ಈಗ ಬೇಯಿಸಿದ ಆಲೂಗಡ್ಡೆಯನ್ನು ಹಾಕಿ, ಮಸಾಲೆಯೊಂದಿಗೆ ಚೆನ್ನಾಗಿ ಮಿಶ್ರಣ ಮಾಡಿ 2 ನಿಮಿಷ ಬೇಯಿಸಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಉದುರಿಸಬೇಕು.

ನಂತರ ಒಂದು ಪಾತ್ರೆಯಲ್ಲಿ ಕಡಲೆಹಿಟ್ಟು, ಅಕ್ಕಿ ಹಿಟ್ಟು, ಅಜ್ವೈನ, ಖಾರದ ಪುಡಿ, ಉಪ್ಪು ಮತ್ತು ಅಡುಗೆ ಸೋಡಾವನ್ನು ಹಾಕಿ.ಇದಕ್ಕೆ ಸ್ವಲ್ಪ ಸ್ವಲ್ಪವೇ ನೀರನ್ನು ಸೇರಿಸುತ್ತಾ, ಗಂಟಿಲ್ಲದಂತೆ ಬಜ್ಜಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಬೇಕು. ಬಳಿಕ ಎರಡು ಬ್ರೆಡ್ ಸ್ಲೈಸ್‌ಗಳನ್ನು ತೆಗೆದುಕೊಂಡು, ಒಂದು ಬ್ರೆಡ್ ಮೇಲೆ ಸಿದ್ಧಪಡಿಸಿದ ಆಲೂಗಡ್ಡೆ ಮಿಶ್ರಣವನ್ನು ಹಾಕಿ, ಮತ್ತೊಂದು ಬ್ರೆಡ್ ಸ್ಲೈಸ್ ಅನ್ನು ಇದರ ಮೇಲಿಟ್ಟು ಮಧ್ಯದಲ್ಲಿ ತ್ರಿಕೋನ ಆಕಾರದಲ್ಲಿ ಕತ್ತರಿಸಿ. ಬಾಣಲೆಯಲ್ಲಿ ಎಣ್ಣೆಯನ್ನು ಚೆನ್ನಾಗಿ ಕಾಯಿಸಿ. ಸಿದ್ಧಪಡಿಸಿದ ತ್ರಿಕೋನ ಬ್ರೆಡ್ ತುಂಡನ್ನು ಕಡಲೆಹಿಟ್ಟಿನ ಮಿಶ್ರಣದಲ್ಲಿ ಮುಳುಗಿಸಿ, ತಕ್ಷಣ ಇದನ್ನು ಕಾದ ಎಣ್ಣೆಗೆ ಬಿಡಬೇಕು. ಮಧ್ಯಮ ಉರಿಯಲ್ಲಿ ಬ್ರೆಡ್ ಪಕೋಡಾ ಎರಡು ಕಡೆ ಹೊಂಬಣ್ಣ ಮತ್ತು ಗರಿಗರಿಯಾಗುವವರೆಗೆ ಚೆನ್ನಾಗಿ ಕರಿದರೆ, ಬಿಸಿಬಿಸಿಯಾದ ಬ್ರೆಡ್ ಪಕೋಡಾ ಸವಿಯಲು ಸಿದ್ಧ.

Must Read