September 23, 2026
Wednesday, September 23, 2026
spot_img

ಚಿಂತೆ ಬಿಡಿ, ತಿಂಡಿ ಮಾಡಿ‌ 52 | ಅದೇ ಇಡ್ಲಿ ತಿಂದು ಬೇಜಾರಾಗಿದ್ಯಾ? ಹಾಗಾದ್ರೆ ಈ ಹೆಲ್ದಿ ‘ವೆಜಿಟೇಬಲ್ ಇಡ್ಲಿ’ ಟ್ರೈ ಮಾಡಿ

ಬೇಕಾಗುವ ಪದಾರ್ಥಗಳು

  • ಇಡ್ಲಿ ಹಿಟ್ಟು
  • ತುರಿದ ಕ್ಯಾರೆಟ್: 1/2 ಕಪ್
  • ಸಣ್ಣಗೆ ಹೆಚ್ಚಿದ ಬೀನ್ಸ್: 1/4 ಕಪ್
  • ಹಸಿ ಬಟಾಣಿ: 1/4 ಕಪ್
  • ಸಣ್ಣಗೆ ಹೆಚ್ಚಿದ ಈರುಳ್ಳಿ: 1
  • ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ: 2
  • ತುರಿದ ಶುಂಠಿ: 1/2 ಚಮಚ
  • ಸಾಸಿವೆ: 1/2 ಚಮಚ
  • ಜೀರಿಗೆ: 1/2 ಚಮಚ
  • ಕರಿಬೇವು: ಸ್ವಲ್ಪ
  • ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
  • ಎಣ್ಣೆ ಅಥವಾ ತುಪ್ಪ: 2 ಚಮಚ
  • ಉಪ್ಪು: ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ

ಬಾಣಲೆಯಲ್ಲಿ 2 ಚಮಚ ಎಣ್ಣೆ ಅಥವಾ ತುಪ್ಪ ಬಿಸಿ ಮಾಡಿ. ಸಾಸಿವೆ, ಜೀರಿಗೆ ಹಾಕಿ ಚಿಟಪಟ ಅಂದ ಮೇಲೆ ಶುಂಠಿ, ಹಸಿಮೆಣಸಿನಕಾಯಿ ಮತ್ತು ಕರಿಬೇವು ಸೇರಿಸಿ ಹುರಿಯಿರಿ. ನಂತರ ಈರುಳ್ಳಿ ಹಾಕಿ ತೆಳು ಹೊಂಬಣ್ಣ ಬರುವವರೆಗೆ ಹುರಿಯಿರಿ. ಈಗ ಕ್ಯಾರೆಟ್, ಬೀನ್ಸ್ ಮತ್ತು ಬಟಾಣಿ ಸೇರಿಸಿ, ಸ್ವಲ್ಪ ಉಪ್ಪು ಚಿಮುಕಿಸಿ 2-3 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ (ತರಕಾರಿಗಳು ಪೂರ್ತಿ ಬೇಯುವುದು ಬೇಡ, ಸ್ವಲ್ಪ ಕ್ರಂಚಿಯಾಗಿದ್ದರೆ ಇಡ್ಲಿ ತಿನ್ನುವಾಗ ರುಚಿ ಚೆನ್ನಾಗಿರುತ್ತದೆ). ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಗ್ಯಾಸ್ ಆಫ್ ಮಾಡಿ, ಈ ಮಿಶ್ರಣವನ್ನು ತಣ್ಣಗಾಗಲು ಬಿಡಿ.

ತಯಾರಿಸಿಟ್ಟುಕೊಂಡ ಇಡ್ಲಿ ಹಿಟ್ಟಿಗೆ ತಣ್ಣಗಾದ ತರಕಾರಿ ಮಿಶ್ರಣವನ್ನು ಸೇರಿಸಿ. ಹಿಟ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿ. ಬೇಕಿದ್ದರೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ (ಹಿಟ್ಟಿನಲ್ಲಿ ಈಗಾಗಲೇ ಉಪ್ಪಿದ್ದರೆ ನೋಡಿ ಸೇರಿಸಿ). ಇಡ್ಲಿ ಪಾತ್ರೆಗೆ ನೀರು ಹಾಕಿ ಕಾಯಲು ಇಡಿ. ಇಡ್ಲಿ ತಟ್ಟೆಗಳಿಗೆ ಸ್ವಲ್ಪ ಎಣ್ಣೆ ಅಥವಾ ತುಪ್ಪ ಸವರಿ, ತರಕಾರಿ ಬೆರೆಸಿದ ಹಿಟ್ಟನ್ನು ಇಡ್ಲಿ ಇಡ್ಲಿ ತಟ್ಟೆಗಳಿಗೆ ಹಾಕಿ. ಇಡ್ಲಿ ಪಾತ್ರೆಯಲ್ಲಿ 10 ರಿಂದ 12 ನಿಮಿಷಗಳ ಕಾಲ ಮಧ್ಯಮ ಉರಿಯ ಹಾವಿಯಲ್ಲಿ ಬೇಯಿಸಿ. ಇಡ್ಲಿ ಬೆಂದ ಮೇಲೆ ತಟ್ಟೆಯನ್ನು ಹೊರಗೆ ತೆಗೆದು 2 ನಿಮಿಷ ಆರಲು ಬಿಡಿ. ನಂತರ ಚಮಚದಿಂದ ಇಡ್ಲಿಗಳನ್ನು ತೆಗೆಯಿರಿ.

ಬಿಸಿಬಿಸಿಯಾದ ಹೆಲ್ದಿ ವೆಜಿಸ್ ಇಡ್ಲಿ ಸಿದ್ಧ! ಇದನ್ನು ತೆಂಗಿನಕಾಯಿ ಚಟ್ನಿ, ಕೆಂಪು ಚಟ್ನಿ ಅಥವಾ ಸಾಂಬಾರ್ ಜೊತೆ ಸವಿಯಲು ಕೊಡಿ.

    Must Read

    error: Copy ಬೇಡ, Coffee ಜೊತೆ ಹಂಚಿಕೊಳ್ಳಿ !